ಗ್ಯಾಸ್ ಸಿಲೆಂಡರ್ ಬೆಲೆ ಪೆಟ್ರೋಲ್ ಡೀಸೆಲ್ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಇಂದು ಶಿವಮೊಗ್ಗ ನಗರದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಂ ಸುಂದರೇಶ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ 400 ರೂಪಾಯಿ ಇದ್ದ ಸಿಲಿಂಡರ್ ಬೆಲೆ 800 ಅಗಿದೆ. ಪೆಟ್ರೋಲ್ 80 ರೂ. ಡೀಸೆಲ್ 40 ರೂ ಏರಿಕೆ ಆಗಿದೆ ಇದರಿಂದ ಜನಸಾಮಾನ್ಯರ ಬದುಕು ನಡೆಸುವುದು ದುಸ್ಥರವಾಗಿದೆ. ರಾಜ್ಯದಲ್ಲಿ ನೆರೆಹಾವಳಿಗೆ ಹೆಚ್ಚುವರಿ ಅನುದಾನ ತರುವಲ್ಲಿಯೂ ಸಹ ಬಿಜೆಪಿ ಸರ್ಕಾರ ವಿಫಲವಾಗಿದೆ. ಜಿಲ್ಲೆಯಲ್ಲಿಯೂ ಬಿಜೆಪಿ ನಾಯಕರ ಸಮಗ್ರ ಯೋಜನೆ ಮತ್ತು ಪರಿಹಾರವಾಗಿದೆ ಎಂದು ಆರೋಪಿಸಿದರು..
C News TV Kannada News Online in cnewstv