Breaking News

“ಆಚಾರ್ಯ ಅದ್ವಿತೀಯ” ರಾಜ್ಯಮಟ್ಟದ ನಿರ್ವಹಣೆ ಹಾಗೂ ಸಾಂಸ್ಕೃತಿಕ ಹಬ್ಬ..

 

ಶಿವಮೊಗ್ಗ: ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಿಂದ ಫೆಬ್ರವರಿ 24ರಂದು ಕಾಲೇಜು ಆವರಣದಲ್ಲಿ ಒಂದು ದಿನದ ರಾಜ್ಯಮಟ್ಟದ ನಿರ್ವಹಣೆ ಹಾಗೂ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಟಿಎನ್ ಸಿ ಕಾಲೇಜು ಪ್ರಾಚಾರ್ಯ ಪ್ರೊ.ಎಚ್.ಎಂ.ಸುರೇಶ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ 10 ಸ್ಪರ್ದೆಗಳು ನಡೆಯಲಿದ್ದು ನಿರ್ವಹಣೆಗೆ ಸಂಬಂಧಿಸಿದಂತೆ 5 ಹಾಗೂ ಸಾಂಸ್ಕೃತಿಕ ಚಟುವಟಿಕೆಗೆ ಸಂಬಂಧಿಸಿದ ಐದು ಸ್ಪರ್ಧೆಗಳು ನಡೆಯಲಿವೆ. ಈ ಎರಡು ವಿಭಾಗದ ಸ್ಪರ್ಧೆಗಳಲ್ಲಿ ಕುವೆಂಪು ವಿಶ್ವವಿದ್ಯಾಲಯ ಹಾಗೂ ರಾಜ್ಯದ ಇತರೆ ವಿಶ್ವವಿದ್ಯಾಲಯಗಳ 50 ತಂಡಗಳಿಂದ ಸುಮಾರು 500 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

ಫೆಬ್ರವರಿ 24ರಂದು ಬೆಳಗ್ಗೆ 9.30ಕ್ಕೆ ಆರಂಭಗೊಳ್ಳಲಿರುವ ಈ ಕಾರ್ಯಕ್ರಮವನ್ನು ಎನ್ ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಉದ್ಘಾಟಿಸಲಿದ್ದಾರೆ. ಕನ್ನಡ ಕೋಗಿಲೆ 2 ನೇ ಸ್ಥಾನಪಡೆದಿರುವ ಎಟಿಎನ್ ಸಿ ಕಾಲೇಜಿನ ವಿದ್ಯಾರ್ಥಿ ಪಾರ್ಥ ಚಿರಂತನ್, ಘ್ಯಾಲಗರ್ ಸೆಂಟರ್ ಹೆಡ್ ಎಚ್.ಎಸ್.ಶಿವಕುಮಾರ್, ಎಟಿಎನ್ ಸಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಆರ್.ಜಗದೀಶ್, ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕ ಪ್ರೊ.ಕೆ.ಎಸ್.ಸದಾಶಿವಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯ ಪ್ರೊ.ಎಚ್.ಎಂ‌.ಸುರೇಶ್ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಅಂದು ಸಂಜೆ 5.30ಕ್ಕೆ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ‌ ನಡೆಯಲಿದ್ದು, ಕಾರ್ಯಕ್ರ‌ಮದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು, ಎನ್ ಇಎಸ್ ಉಪಾಧ್ಯಕ್ಷ ಅಶ್ವತ್ಥ ನಾರಾಯಣ ಶೆಟ್ಟಿ, ಘ್ಯಾಲಗರ್ ಸೆಂಟರ್ ಹೆಡ್ ಎಚ್.ಎಸ್.ಶಿವಕುಮಾರ್ ಹಾಗೂ ಕಾಲೇಜು ಪ್ರಾಚಾರ್ಯ ಪ್ರೊ.ಎಚ್.ಎಂ.ಸುರೇಶ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

*