
ಕುಖ್ಯಾತ ರೌಡಿ ಶೀಟರ್ ಮಾರ್ಕೆಟ್ ಲೋಕಿ ಎಡಗಾಲಿಗೆ ಶೂಟೌಟ್ ಮಾಡಿರುವ ಪೊಲೀಸರು ಲೋಕಿಯನ್ನು ವಶಕ್ಕೆ ಪಡೆದಿದ್ದಾರೆ. ಮಾರ್ಕೆಟ್ ಗಿರಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮಾರ್ಕೆಟ್ ಲೋಕಿ ಅಂದಿನಿಂದ ತಲೆಮರೆಸಿಕೊಂಡಿದ್ದ. ಇಂದು ಅಬ್ಬಲಗೆರೆ ಬಳಿ ಮಾರ್ಕೆಟ್ ಲೋಕಿ ಇದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಲೋಕಿ ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಲೋಕಿಯ ಎಡಗಾಲಿಗೆ ಶೂಟ್ ಮಾಡಿ ವಶಕ್ಕೆ ಪಡೆದು ಬಳಿಕ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
C News TV Kannada News Online in cnewstv