Breaking News

ಬಹುಮುಖಿ ರಾಷ್ಟ್ರೀಯ ನಾಟಕೋತ್ಸವ ಫೆಬ್ರವರಿ 15 ರಿಂದ 22

 

ಶಿವಮೊಗ್ಗ ರಂಗಾಯಣ ವತಿಯಿಂದ ಬಹುಮುಖಿ ರಾಷ್ಟ್ರೀಯ ನಾಟಕೋತ್ಸವವನ್ನು ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಫೆಬ್ರವರಿ 15 ರಿಂದ 22 ರವರೆಗೆ ಅಯೋಜಿಸಲಾಗಿದೆ ಎಂದು ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ತಿಳಿಸಿದರು..

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಟಕೋತ್ಸವದಲ್ಲಿ ಮಣಿಪುರಿ, ಹಿಂದಿ, ತುಳು, ಕನ್ನಡ ಭಾಷೆಯ ನಾಟಕಗಳು ಪ್ರದರ್ಶಿಸಲ್ಪಡುತ್ತವೆ. ಇದಕ್ಕೆ ಮಣಿಪುರ, ಮುಂಬಯಿ, ಮಂಗಳೂರು, ಧಾರವಾಡ, ಉಡುಪಿ, ಮೂಡಬಿದರೆ ಹಾಗೂ ಬೆಂಗಳೂರಿನ ಪ್ರತಿಷ್ಠಿತ ನಾಟಕ ತಂಡಗಳು ಪಾಲ್ಗೊಳ್ಳಲಿವೆ. ಪ್ರತಿದಿನ ನಾಟಕದ ಪ್ರದಶನ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸಂಜೆ 6.45 ಕ್ಕೆ ನಡೆಯಲಿದೆ. ರಂಗೋತ್ಸವದಲ್ಲಿ ಪ್ರತಿ ದಿನ ರಂಗಭೂಮಿ ರಾಷ್ಟ್ರೀಯ ವಿಚಾರ ಸಂಕಿರಣ, ರಂಗಗೀತೆಗಳು ಮತ್ತು ರಂಗರೂಪಕ, ಹಾಗೂ ನಾಟಕಗಳ ಛಾಯಚಿತ್ರಗಳ ಪ್ರದಶನಗಳನ್ನು ಸಹಾ ಅಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

*