Breaking News

ಮಹಿಳೆಯರಿಗೆ ಒಲಿದ ಮಹಾನಗರ ಪಾಲಿಕೆ ಗದ್ದುಗೆ.. ಸುವರ್ಣಾ ಶಂಕರ್ ಮೇಯರ್, ಸುರೇಖಾ ಮುರಳೀಧರ್ ಉಪಮೇಯರ್

 

ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಪ್ರಕ್ರಿಯೆ ಮುಗಿದಿದ್ದು ಮೇಯರ್ ಆಗಿ ಸುವರ್ಣ ಶಂಕರ್ ಮತ್ತು ಉಪಮೇಯರ್ ಆಗಿ ಸುರೇಖಾ ಮುರುಳೀಧರ್ ಆಯ್ಕೆಯಾಗಿದ್ದಾರೆ.

ಇಂದು ಬೆಳಿಗ್ಗೆ 11-30 ಕ್ಕೆ ಚುನಾವಣಾ ಪ್ರಕ್ರಿಯೆಯನ್ನು ಮುಖ್ಯ ಚುನಾವಣಾ ಅಧಿಕಾರಿಯಾಗಿ ವಿದ್ಯಾಕುಮಾರಿ ಹಾಗು ಪ್ರಾದೇಶಿಕ ಆಯುಕ್ತ N V ಪ್ರಸಾದ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ಮೇಯರ್ ಚುನಾವಣೆಗೆ ಬಿಜೆಪಿಯ ಸುವರ್ಣ ಶಂಕರ್ ಮತ್ತು ಕಾಂಗ್ರೆಸ್ ನ ಯಮುನಾ ರಂಗೇಗೌಡ ನಾಮಪತ್ರ ಸಲ್ಲಿಸಿದ್ದರು. ಸುವರ್ಣ ಶಂಕರ್ ಪರವಾಗಿ 26 ಮತಗಳು ಲಭ್ಯವಾದರೆ ಯಮುನಾ ರಂಗೇಗೌಡರಿಗೆ 12 ಮತಗಳು ಲಭ್ಯವಾಗಿದೆ. ಇದರಂದಾಗಿ ಸುವರ್ಣ ಶಂಕರ್ ಮೇಯರ್ ಆಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.

 

ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸುರೇಖಾ ಮರುಳೀಧರ್ ಮತ್ತು ಕಾಂಗ್ರೆಸ್ ನ ಮೆಹಖ್ ಶರೀಫ್ ನಾಮಪತ್ರ ಸಲ್ಲಿಸಿದ್ದು ಸುರೇಖಾ ಮುರುಳೀದರ್ ಗೆ 26 ಮತಗಳು ಮೆಹಖ್ ಶರೀಫ್ ಗೆ 12 ಮತಗಳು ಲಭಿಸಿದೆ. ಇದರಿಂದ ಬಿಜೆಪಿಯ ಸುರೇಖಾ ಮುರುಳೀದರ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

*