ಇಂದು ಪೊಲೀಸ್ ಇಲಾಖೆಯು ಜಿಲ್ಲಾ ಪೊಲೀಸ್
ಕವಾಯತು ಮೈದಾನದಲ್ಲಿ 3 ದಿನಗಳ ಕಾಲ ನಡೆಯ
ಲಿರುವ ವಾರ್ಷಿಕ ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಉದ್ಘಾಟಿಸಿದರು.
ಪೊಲೀಸರು ತಮ್ಮ ವೃತ್ತಿ ಬದುಕಿನಲ್ಲಿ
ಶಿಸ್ತು ರೂಢಿಸಿಕೊಂಡು ಸದಾ ಜಾಗೃತವಾಗಿರಬೇಕು. ತಮ್ಮ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದರ ಜೊತೆಗೆ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲರೂ
ವಿಜಯಿಗಳಾಗುವುದು ಸಾಧ್ಯವಿಲ್ಲದಿರಬಹುದು. ಆದರೆ ಗೆಲ್ಲುವ ಪ್ರಯತ್ನದಿಂದ ಹಿಂದೆ ಸರಿಯಬಾರದು.
ಕ್ರೀಡೆಯಲ್ಲಿ ಸ್ಪರ್ಧಾಭಾವನೆ ಬಹುಮುಖ್ಯ. ಎಲ್ಲಾ
ಸಂಘಟಿತವಾದ ಪ್ರಯತ್ನಕ್ಕೆ ಜಯ ಖಂಡಿತ ಲಭಿಸುತ್ತದೆ ಎಂದರು.
ಕ್ರೀಡಾಕೂಟದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕೆ.ಎ.ಶಾಂತರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ
ಡಾ|| ಶೇಖರ್ ಹೆಚ್.ತಕ್ಕಣ್ಣನವರ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಪೊಲೀಸ್ ಕ್ರೀಡಾಳುಗಳು, ಮಹಿಳಾ ಪೊಲೀಸ್ ಕ್ರೀಡಾಪಟುಗಳು ಉಪಸ್ಥಿತರಿದ್ದರು.
C News TV Kannada News Online in cnewstv