ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಕೆ.ಬಿ.ಪ್ರಸನ್ನ
ಕುಮಾರ್ ನೇತೃತ್ವದಲ್ಲಿ ನಗರದ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ
ದೇಶದ ಅಖಂಡತೆಗೆ ಭಂಗ ತಂದಿದೆ. ಜನ ಆತಂಕದಲ್ಲಿದ್ದಾರೆ ಎಂದು ಪ್ರತಿಭಟನಾನಿರತರು ದೂರಿದರು.

ಕಾಯ್ದೆ ತಿದ್ದುಪಡಿ ಕೈಬಿಟ್ಟು ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸಬೇಕು. ಧರ್ಮಾಂಧತೆಯ ಆಧಾರದ ಮೇಲೆ ಯಾವುದೇ ಕಾಯ್ದೆಗಳನ್ನು
ರಚಿಸಬಾರದು ಎಂದು ಧರಣಿ ನಿರತರು ಆಗ್ರಹಿಸಿದರು.
ದೇಶದ ಐಕ್ಯತೆಗೆ ಮಾರಕವಾಗಿರುವ ಸಂವಿಧಾನದ ಆಶಯಗಳಿಗೆ ಧಕ್ಕೆ
ತರುವ, ಪ್ರಜಾಪ್ರಭುತ್ವ ವಿರೋಧಿಯಾಗಿರುವ ಈ ವಿಧೇಯಕ ಕೈ ಬಿಡಬೇಕು ಎಂದು ಘೋಷಣೆ ಮೂಲಕ ಧರಣಿ ನಿರತರು ಒತ್ತಾಯಿಸಿದ್ದರು.
C News TV Kannada News Online in cnewstv