ಹೊಸಮನೆ ಬಡಾವಣೆಯಲ್ಲಿ ನೀರಿಗೆ ಹಾಹಾಕಾರ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಬಡಾವಣೆಯ ಜನತೆ.
ಶಿವಮೊಗ್ಗ ನಗರದಲ್ಲಿ ಎರಡು ದಿನಕ್ಕೊಮ್ಮೆ ನೀರನ್ನು ಮಹಾ ನಗರ ಪಾಲಿಕೆ ಎಲ್ಲ ಬಡಾವಣೆಯಲ್ಲೂ ನೀಡುತ್ತಿದ್ದು ಆದರೆ ನೀರು ಸರಬರಾಜು ಮಾಡುವ ಸಿಬ್ಬಂದಿಗಳೇ ಇಂದು ಹೊಸಮನೆ ಬಡಾವಣೆಯಲ್ಲಿ ತಮಗೆ ಬೇಕಾದವರಿಗೆ ಟ್ಯಾಂಕ್ ಗಟ್ಟಲೆ ನೀರನ್ನು ಒಂದೇ ಮನೆಗೆ ಸರಬರಾಜನ್ನು ಮಾಡಿದ್ದು ಅಲ್ಲಿಯ ಸಾರ್ವಜನಿಕರು ಸಂಘ ಸಂಸ್ಥೆಗಳ ಮುಖಂಡರು ವಾಟರ್ ಟ್ಯಾಂಕರ್ ಲಾರಿಯನ್ನು ತಡೆದು ಅಧಿಕಾರಿಗಳಾದ AEE ಸಿದ್ದಪ್ಪ ಹಾಗೂ ಬಲರಾಮ ರವರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕುಡಿಯಲಿಕ್ಕೆ ಎರಡು ಕೊಡಪಾನ ನೀರು ಸಿಗುತ್ತಿಲ್ಲ ಇಂತಹ ಸಂದರ್ಭದಲ್ಲಿ ನೀವು ನಿಮಗೆ ಬೇಕಾದವರಿಗೆ ಟ್ಯಾಂಕರ್ಗಳಲ್ಲಿ ಮನೆಗಳಿಗೆ ನೀರು ಕಲ್ಪಿಸಿ ಕೊಡುವುದು ಎಷ್ಟರ ಮಟ್ಟಿಗೆ ಸರಿ ?? ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಿಗೂ ಗಮನಕ್ಕೆ ಬಾರದೆ ತಾವೇ ತಮಗೆ ಬೇಕಾದವರಿಗೆ ನೀರನ್ನು ಕೊಡುತ್ತಾ ಮಹಾನಗರ ಪಾಲಿಕೆಯ ಸದಸ್ಯರಿಗೆ ಅವಮಾನಿಸುವುದು ಸರಿಯೇ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ರೇಖಾ ರಂಗನಾಥ್, ವಾರ್ಡ್ ಪ್ರಮುಖರಾದ ರಂಗನಾಥ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
Recent Comments