ಜಿಲ್ಲಾ ಉಸ್ತವಾರಿ ಸಚಿವ ಡಿ.ಸಿ.ತಮ್ಮಣ್ಣ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಗಳ ವೀಕ್ಷಣೆ ನಡೆಸುವ ವೇಳೆ ಜನ ಬೀದಿ ದೀಪಗಳ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಆಗ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಸಾರ್ವಜನಿಕವಾಗಿಯೇ ಮಾತಿನ ಚಕಮಕಿ ಮಾಡಿಕೊಳ್ಳುವ ಮೂಲಕ ಹಾದಿರಂಪ ಮಾಡಿಕೊಂಡಿದ್ದಾರೆ.
ನೀನು ಕಮಿಷನರ್ ಅಲ್ವಾ ಸಮಸ್ಯೆ ಪರಿಹರಿಸುವ ಎಂದು ಆಯನೂರು ಮಂಜುನಾಥ್ ಹೇಳಿದ್ದರಿಂದ ಸಿಟ್ಟಿಗೆದ್ದ ಚಾರುಲತಾ ಸೋಮಲ್ ಏಕವಚನದಲ್ಲಿ ಮಾತನಾಡಬೇಡಿ. ಹೀಗೆ ಏಕ ವಚನದಲ್ಲಿ ಮಾತನಾಡಿದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು. ಇದರಿಂದ ಸಿಟ್ಟಿಗೆದ್ದ ಆಯನೂರು ಮಂಜುನಾಥ್ ಧಮಕಿ ಹಾಕಿಸಿಕೊಳ್ಳಲು ನಾನೇನು ಕಾರ್ಪೊರೇಟರ್ ಅಲ್ಲ ನನ್ನ ಮೇಲೆ ಕ್ರಮಕೈಗೊಳ್ಳಿ ನೋಡೋಣ ಎಂದು ಪ್ರತಿ ಸವಾಲು ಹಾಕಿದರು. ಈ ವೇಳೆ ಡಿ.ಸಿ.ತಮ್ಮಣ್ಣ ಇಬ್ಬರನ್ನು ಸಮಾಧಾನಪಡಿಸಿದರು. ಹಠಾತ್ ಆಗಿ ಈ ಘಟನೆ ನಡೆದಿದ್ದರಿಂದ ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಮೂಕಪ್ರೇಕ್ಷಕರಾಗಿ ಈ ಘಟನೆ ನೋಡುತ್ತಾ ನಿಂತಿದ್ದರು..
C News TV Kannada News Online in cnewstv