Breaking News

ಸ್ವತಂತ್ರ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ

 

ಸ್ವತಂತ್ರಕ್ಕೆ ಕಿಚ್ಚು ಹಚ್ಚಿದ ಊರು ಈಸೂರು. ಅಂದು ಸ್ವಾತಂತ್ರಕ್ಕಾಗಿ ಬೀದಿಗೆ ಇಳಿದು ಹೋರಾಡಿದ ಜನರು ಇಂದು ಕುಡಿಯುವ ನೀರಿಗಾಗಿ ಬೀದಿಗೆ ಇಳಿದು ಹೋರಾಡುತ್ತಿದ್ದಾರೆ…ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ‌ ಪರದಾಟತ್ತಿದ್ದಾರೆ. ಊರಿನ ಕೆರೆಕಟ್ಟೆಗಳು ತಿಂಗಳ ಹಿಂದೆಯೇ ಬತ್ತಿಹೋಗಿವೆ..ಕೊಳವೆ ಬಾವಿಗಳಲ್ಲಿ ತಕ್ಕಮಟ್ಟಿಗೆ ನೀರು ಸಿಗುತ್ತಿತ್ತು ಆದರೆ ಇದೀಗ
ಕೊಳವೆ ಬಾವಿಗಳಲ್ಲೂ ನೀರು ಬಿತ್ತಿ ಹೊಗಿದೆ.

ಇಂದು ಈಸೂರು ಗ್ರಾಮದ ಜನತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಖಾಲಿ ಕೊಡ ಹಿಡಿದು ಗ್ರಾಮಪಂಚಾಯಿತಿಗೆ ಮುತ್ತಿಗೆ ಹಾಕಿದರು ಹಾಗೂ ಇನ್ನೊಂದು ವಾರದ ಒಳಗಾಗಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳುವಂತೆ ಪಂಚಾಯತಿ ಅಧಿಕಾರಿಗಳಿಗೆ ಗ್ರಾಮಸ್ಥರು ಗಡುವು ನೀಡಿದರು.

ಇದು ಕೇವಲ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮವೊಂದರ ಕಥೆಯಲ್ಲ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಹಾಗೂ ಸೊರಬ ತಾಲೂಕಿನಲ್ಲಿ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಬೀಕರ ಬರ ಎದುರಾಗಿದೆ.

Leave a Reply

Your email address will not be published. Required fields are marked *

*