ಶಿಮುಲ್ ಅಧಿಕಾರ ಕಾಂಗ್ರೆಸ್ ಹಾಗೂ ಜೆಡಿಎಸ್ ತೆಕ್ಕೆಗೆ.
ಶಿವಮೊಗ್ಗದಲ್ಲಿ ಇಂದು ಬೆಳಿಗ್ಗಿನಿಂದಲೇ ಶಿಮೂಲ್ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದ್ದಿದ್ದು, ಸುಮಾರು ನಾಲ್ಕು ಗಂಟೆಯ ವೇಳೆಗೆ ಶಿಮೂಲ್ ಒಳಗಡೆ ಚುನಾವಣೆಯ ಮತದಾನ ಮುಗಿದು, ಮೂರು ವಿಭಾಗಗಳ ಮತಎಣಿಕೆಯಾಗಿ ಫಲಿತಾಂಶ ಪ್ರಕಟವಾಗಿವೆ..
ಶಿಮುಲ್ ನ 14 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ 10 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಬಿಜೆಪಿಯ 3 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿಯ ಆಡಳಿತ ಮಂಡಳಿಯಲ್ಲಿದ್ದ 14 ನಿರ್ದೇಶಕರ ಪೈಕಿ 11 ಮಂದಿ ಸ್ಪರ್ಧಿಸಿದ್ದರು ಅದರಲ್ಲಿ 8 ಮಂದಿ ಪುನರಾಯ್ಕೆ ಯಾಗಿದ್ದು, ಮೂವರು ಸೋಲನುಭವಿಸಿದ್ದಾರೆ.
ಜೆಡಿಎಸ್ ನ ಘಟಾನುಘಟಿ ಅಭ್ಯರ್ಥಿಗಳಾದ ಶಿಮುಲ್ ಮಾಜಿ ಅಧ್ಯಕ್ಷ ಕೆ.ಎಲ್.ಜಗದೀಶ್ವರ್, ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಅವರ ಪತಿ ಎಸ್ ಕುಮಾರ್ ರವರು ಸಹ ಈ
ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ..
ಸಾಗರ ವಿಭಾಗಕ್ಕೆ ಆಯ್ಕೆಯಾದ ನಿರ್ದೇಶಕರು ಹಾಗೂ ಪಡೆದ ಮತಗಳು
1.ವಿದ್ಯಾಧರ (121) 2.ಶ್ರೀಪಾದಹೆಗಡೆ ನಿಸರಾಣಿ (111)
3.ಶಿವಶಂಕರ್ (124)
ಶಿವಮೊಗ್ಗ ವಿಭಾಗಕ್ಕೆ ಆಯ್ಕೆಯಾದ ನಿರ್ದೇಶಕರು ಹಾಗೂ ಪಡೆದ ಮತಗಳು
1.ಶಿವಮೊಗ್ಗ ತಾಲೂಕಿನ ದಿನೇಶ್ (124) 2.ತೀರ್ಥಹಳ್ಳಿ ತಾಲೂಕಿನ ತಾರಾನಾಥ್ (117) 3.ಭದ್ರಾವತಿ ತಾಲೂಕಿನ ಆನಂದ್ (140 )
ದಾವಣಗೆರೆ ವಿಭಾಗಕ್ಕೆ ಆಯ್ಕೆಯಾದ ನಿರ್ದೇಶಕರು ಹಾಗೂ ಪಡೆದ ಮತಗಳು
1.ಹರಿಹರ ತಾಲೂಕಿನ ಜಗದೀಶ್ ಬಣಕಾರ್ 2.ಚನ್ನಗಿರಿ ತಾಲೂಕಿನ ಎಚ್.ಕೆ.ಬಸಪ್ಪ 3.ಹೊನ್ನಾಳಿ ತಾಲೂಕಿನ ಬಿ.ಜಿ.ಬಸವರಾಜಪ್ಪ 4.ದಾವಣಗೆರೆ ತಾಲೂಕಿನ ಕೆ.ಎನ್.ಸೋಮಶೇಖರಪ್ಪ .
C News TV Kannada News Online in cnewstv