Breaking News

ಅಡ್ವಾಣಿ ಅವರನ್ನು ಮೂಲೆಗು‌ಂಪು ಮಾಡಿದಂತೆ ಯಡಿಯೂರಪ್ಪ ಕೂಡ ಮೂಲೆಗುಂಪಾಗಲಿದ್ದಾರೆ – ಬೇಳೂರು ಗೋಪಾಲಕೃಷ್ಣ

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಯಡಿಯೂರಪ್ಪ ಅವರು ಮೋದಿ ಹೆಸರಲ್ಲಿ ಮತ ಕೇಳುತ್ತಿರುವುದು ದುರಂತದ ಸಂಗತಿ. ಹೇಗೆ ಅಡ್ವಾಣಿ ಅವರನ್ನು ಮೂಲೆಗು‌ಂಪು ಮಾಡಿದಾರೇ ಹಾಗೇ ಯಡಿಯೂರಪ್ಪ ಅವರನ್ನೂ ಮೂಲೆಗುಂಪು ಮಾಡುವುದು ಖಚಿತ. ಇನ್ನೂ ಸದಾನಂದ ಗೌಡರೇ ಚುನಾವಣೆ ಬಳಿಕ ಯಡಿಯೂರಪ್ಪ ಅಧ್ಯಕ್ಷರಾಗಿ ಇರುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ.. ಬಿಜೆಪಿಯವರು ಮಾತು ಮಾತಿಗೂ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ನಾವೂ ಹಿಂದುಗಳೆ, ನಾವು ಹಿಂದುತ್ವದ ಪಾಠ ಅವರಿಂದ ಕಲಿಯಬೇಕಿಲ್ಲ ಎಂದು ಟಾಂಗ್ ನೀಡಿದರು.

ಬಿಜೆಪಿಯವರು ಮಂಡ್ಯ ಅಭ್ಯರ್ಥಿ ನಿಖಿಲ್ ಕುಮಾರ್ ಸ್ವಾಮಿ ಆಸ್ತಿ 9 ಕೋಟಿ ಎಂದು ಟೀಕಿಸುತ್ತಾರೆ ಆದರೆ ಬಿಜೆಪಿಯ ಶಿವಮೊಗ್ಗ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಆಸ್ತಿ ಕಳೆದ ಐದು ತಿಂಗಳಲ್ಲಿ 12 ಕೋಟಿ ಹೆಚ್ಚಾಗಿದೆ. ಈ ಆದಾಯ ಎಲ್ಲಿಂದ ಬಂತು ಎಂದು ನೇರ ಪ್ರಶ್ನೆಯನ್ನು ಹಾಕಿದರು..ನಮ್ಮ ದೇಶದ ಅಸ್ತಿಯಾಗಿರುವ ಸೈನಿಕರನ್ನು ಚುನಾವಣೆಗೆ ಬಳಸಿಕೊಳ್ಳುತ್ತಿರುವುದು ದೊಡ್ಡ ದುರಂತ. ಯೋಗಿ ಆದಿತ್ಯನಾಥ್ ಅವರು ಸೈನ್ಯವನ್ನು ಮೋದಿ ಸೈನ್ಯ ಎಂದಿರುವುದು ಸೈನಿಕರಿಗೆ ಮಾಡಿದ ಅವಮಾನ ಎಂದು ಬೇಳೂರು ಗುಡುಗಿದರು…

Leave a Reply

Your email address will not be published. Required fields are marked *

*