10 ವರ್ಷಗಳ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವಂತಹ ಸಹ್ಯಾದ್ರಿ ಉತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಜಾನಪದ ಕ್ರೀಡೆ, ಮ್ಯಾರಥಾನ್, ಸೈಕ್ಲಿಂಗ್, ರೈತರ, ಹಾಗು ಮಹಿಳೆಯರ ಸಮಸ್ಯೆಗಳ ಕುರಿತು ವಿಚಾರ ಸಂಕಿರಣಗಳು ನಡೆಸಲಾಗುತ್ತಿದೆ. ಮತ್ತು
ಇದೇ ಮೊದಲ ಬಾರಿಗೆ ಸಹ್ಯಾದ್ರಿ ಉತ್ಸವದಲ್ಲಿ ವಿಶೇಷ ವಾಗಿ ಬಸ್ ಪ್ರವಾಸ, ಹೆಲಿ ಟೂರ್, ಟಾಂಗಾ ಟೂರ್ ಗಳನ್ನು ಅಯೋಜನೆ ಮಾಡಲಾಗಿದ್ದು, ಜ.24 ರಿಂದ 27 ರ ವರೆಗೆ ನಡೆಯಲಿದೆ. 4 ದಿನಗಳ ಜಿಲ್ಲಾ ಬಸ್ ಪ್ರವಾಸಕ್ಕೆ ದಿನಕ್ಕೆ 7 ಬಸ್ ಮಾರ್ಗಗಳನ್ನ ನಿಯೋಜಿಸಲಾಗಿದ್ದು. ಮುಂಗಡವಾಗಿ ಇದರ ಬುಕಿಂಗ್ ಭತಿಯಾಗಿದೆ.. ಹೆಲಿ ಟೂರ್ ಟಾಂಗಾ ಟೂರ್ ಹಾಗೂ ನಗರ ಪ್ರವಾಸೋದ್ಯಮ ಟೂರ್ ಗಳ ಬೇಡಿಕೆ ತಕ್ಕಂತೆ ವ್ಯವಸ್ಥೆ ಮಾಡಲಾಗುವುದು.

ಯಾವ ಯಾವ ಕ್ರೀಡೆಯಲ್ಲಿ ಎಷ್ಟು ಜನ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.
ಎತ್ತಿನ ಗಾಡಿ ಓಟಕ್ಕೆ 80, ದೇಹದಾರ್ಢ್ಯ ಸ್ಪರ್ಧೆಗೆ 150,
ಕೆಸರುಗದ್ದೆ ಓಟ 150 ಲಾನ್ ಟೆನ್ನಿಸ್ 50
ಈಜು 150, ಸಾಹಸ ಕ್ರೀಡೆಗಳಿಗೆ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು
ಸ್ಕೆಟಿಂಗ್ ಸ್ಪರ್ಧೆಗೆ ಈಗಾಗಲೇ 50 ಹೆಚ್ಚು ಜನ ಹೆಸರು ನೋಂದಾಯಿಸಿದ್ದಾರೆ.. ಶಿಕಾರಿಪುರದಿಂದ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದ ತನಕ ನಡೆಯುವ ಸೈಕಲ್ ಸ್ಪರ್ಧೆಗೆ ಒಟ್ಟು ಪುರುಷರು ಹಾಗೂ ಮಹಿಳೆಯರು ಸೇರಿದಂತೆ ಒಟ್ಟು 150 ಕ್ಕೂ ಹೆಚ್ಚುಸ್ಪರ್ಧಾರ್ತಿಗಳು ಹೆಸರು ನೋಂದಾಯಿಸಿದ್ದಾರೆ. ಅಲ್ಲದೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಸ್ಥಳದಲ್ಲಿಯೇ ಹೆಸರು ನೋಂದಾಯಿಸಬಹುದಾಗಿದೆ.