ಸಹ್ಯಾದ್ರಿ ಉತ್ಸವದಲ್ಲಿ `ರಂಗ ಸಂಕ್ರಾತಿ’ ನಾಟಕೋತ್ಸವ ಮತ್ತು ಚಲನಚಿತ್ರೋತ್ಸವ ಆಯೋಜನೆ:

 

ಜನವರಿ 23ರಿಂದ ಐದು ದಿನಗಳ ಕಾಲ ನಡೆಯಲಿರುವ ಸಹ್ಯಾದ್ರಿ ಉತ್ಸವದ ಸಂದರ್ಭದಲ್ಲಿ `ರಂಗ ಸಂಕ್ರಾತಿ’ ನಾಟಕೋತ್ಸವ ಹಾಗೂ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದ್ದಾರೆ.
ಬ್ಯಾರೀಸ್ ಸಿಟಿ ಸೆಂಟರ್ ಮಾಲ್‍ನಲ್ಲಿರುವ ಸುಸಜ್ಜಿತ ಭಾರತ್ ಸಿನೆಮಾಸ್‍ನಲ್ಲಿ ಕನ್ನಡ ಚಲನಚಿತ್ರೋತ್ಸವ ನಡೆಯಲಿದೆ. ಜನವರಿ 24ರಿಂದ 27ರವರೆಗೆ ನಾಲ್ಕು ದಿನಗಳ ಕಾಲ ಒಟ್ಟು 14 ಕನ್ನಡದ ವೈವಿಧ್ಯಮಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಚಿತ್ರ ಪ್ರದರ್ಶನ ಉಚಿತವಾಗಿದ್ದು, ಮೊದಲು ಬಂದವರಿಗೆ ಪ್ರವೇಶಕ್ಕೆ ಆದ್ಯತೆ ನೀಡಲಾಗುವುದು.

ಜ.24ರಂದು ಚಿತ್ರ ಪ್ರದರ್ಶನ ಬೆಳಿಗ್ಗೆ 10ರಿಂದ 12ರವರೆಗೆ ನಡೆಯಲಿದೆ. ಜ.25ರಿಂದ 27ರವರೆಗೆ ಬೆಳಿಗ್ಗೆ 8ರಿಂದ 10ರವರೆಗೆ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಸಿನೆಮಾಗಳ ವಿವರ: ಜ.24ರಂದು ಒಂದಲ್ಲ ಎರಡಲ್ಲ ಮತ್ತು ದಯವಿಟ್ಟು ಗಮನಿಸಿ, ಜ.25ರಂದು ಸಹಿಪ್ರಾಶಾ ಕಾಸರಗೋಡು, ಜೀರ್ಜಿಂಬೆ, ಎಳೆಯರು ನಾವು ಗೆಳೆಯರು ಮತ್ತು ಮೈತ್ರಿ, ಜ.26ರಂದು ಶುದ್ಧಿ, ರಾಜಕುಮಾರ, ಅಂಬಿ ನಿನಗೆ ವಯಸ್ಸಾಯಿತು ಮತ್ತು ಯೂ ಟರ್ನ್, ಜ.27ರಂದು ಹೆಬ್ಬೆಟ್ಟು ರಾಮಕ್ಕ, ನಾನು ಅವನಲ್ಲ ಅವಳು, ನಾಗರಹಾವು ಮತ್ತು ಆ ಕರಾಳ ರಾತ್ರಿ ಸಿನೆಮಾ ಪ್ರದರ್ಶನಗೊಳ್ಳಲಿದೆ.

ಮಕ್ಕಳ ಸಿನೆಮಾ, ಪ್ರಶಸ್ತಿ ವಿಜೇತ ಸಿನೆಮಾ, ಮನೋರಂಜನೆ ಸಿನೆಮಾ, ಜನಪ್ರಿಯ ಸಿನೆಮಾ, ವಿಷಯಾಧಾರಿತ ಸಿನೆಮಾ ಸೇರಿದಂತೆ ಸದಭಿರುಚಿಯ ಸಿನೆಮಾಗಳನ್ನು ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸಿನೆಮಾ ವಿಮರ್ಶಕರಿಗೆ, ಸಾರ್ವಜನಿಕರಿಗೆ ಉತ್ತಮ ಚಿತ್ರಗಳನ್ನು ಉಚಿತವಾಗಿ ವೀಕ್ಷಿಸಲು ಉತ್ತಮ ಅವಕಾಶ ಇದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಗಳನ್ನು ವೀಕ್ಷಿಸುವಂತೆ ಅವರು ಮನವಿ ಮಾಡಿದ್ದಾರೆ.

ಉದ್ಘಾಟನೆಗೆ ತಾರಾ ಮೆರಗು: ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಜನವರಿ 24ರಂದು ಬೆಳಿಗ್ಗೆ 9ಗಂಟೆಗೆ ಸಿಟಿ ಸೆಂಟರ್ ಮಾಲ್‍ನಲ್ಲಿ ನಡೆಯಲಿದ್ದು, ಖ್ಯಾತ ಚಿತ್ರನಟ ವಿಜಯ ಕಾಶಿ ಅವರು ಚಾಲನೆ ನೀಡುವರು. ಪ್ರಥಮ ದಿನ ಪ್ರದರ್ಶನಗೊಳ್ಳಲಿರುವ ಚಿತ್ರಗಳಾದ ಒಂದಲ್ಲ ಎರಡಲ್ಲ ಚಿತ್ರ ನಿರ್ದೇಶಕ ಸತ್ಯಪ್ರಕಾಶ್ ಹಾಗೂ ದಯವಿಟ್ಟು ಗಮನಿಸಿ ಚಿತ್ರದ ನಿರ್ದೇಶಕ ರೋಹಿತ್ ಪದಕಿ ಅವರು ಉಪಸ್ಥಿತರಿದ್ದು, ಸಿನೆಮಾ ಪ್ರದರ್ಶನ ಬಳಿಕ ಪ್ರೇಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಚಿತ್ರನಟಿ ಭಾವನಾ ರಾವ್ ಉಪಸ್ಥಿತರಿರುವರು.

ರಂಗ ಸಂಕ್ರಾತಿ: ರಂಗ ಸಂಕ್ರಾತಿ ಹೆಸರಿನಲ್ಲಿ ಜನವರಿ 23ರಿಂದ 27ರವರೆಗೆ ಐದು ದಿನಗಳ ಕಾಲ ಶಿವಮೊಗ್ಗ ರಂಗಾಯಣದಲ್ಲಿ ನಾಟಕೋತ್ಸವ ಹಾಗೂ ಪೂರ್ವರಂಗ ಆಯೋಜಿಸಲಾಗಿದ್ದು, ಜಿಲ್ಲೆಯ ರಂಗ ತಂಡಗಳಿಂದ ಉತ್ತಮ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.

ಜ.23ರಂದು ಸಂಜೆ 6.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಹಿರಿಯ ರಂಗಕರ್ಮಿ ಚಿದಂಬರ ರಾವ್ ಜಂಬೆ ರಂಗ ಸಂಕ್ರಾತಿಗೆ ಚಾಲನೆ ನೀಡುವರು. ಬಳಿಕ ಜಾಗೃತಿ ಕಲಾವೇದಿಕೆ ಹೊಸನಗರ ತಂಡದಿಂದ `ಕಾಡೇಗೂಡೆ’ ಹಾಗೂ ನಮ್ ಟೀಂ ಶಿವಮೊಗ್ಗ ತಂಡದಿಂದ `ಶೂದ್ರ ತಪಸ್ವಿ’ ನಾಟಕ ಪ್ರದರ್ಶನ ನಡೆಯಲಿದೆ. ಜ.24ರಂದು 6.30ಕ್ಕೆ ಶಿವರುದ್ರಪ್ಪ ಜೋಗಿ ತಂಡ ಸೊರಬದಿಂದ ಜೋಗಿ ಪದಗಳು ಕಾರ್ಯಕ್ರಮ, 7ಗಂಟೆಗೆ ರಂಗಮಂಚ ಕಾಗೋಡು, ಸಾಗರ ತಂಡದಿಂದ ಫಟಿಂಗ ಪ್ರಹಸನ ನಾಟಕ ಪ್ರದರ್ಶನ ನಡೆಯಲಿದೆ. ಜ.25ರಂದು ಗಿರಿಧರ ಮೂರ್ತಿ ಹಾಗೂ ತಂಡ ಭದ್ರಾವತಿಯವರಿಂದ ರಂಗ ಗೀತೆಗಳು, ನಟಮಿತ್ರರು ತೀರ್ಥಹಳ್ಳಿ ತಂಡದಿಂದ ಜಿ.ಕೆ.ಮಾಸ್ತರ ಪ್ರಣಯ ಪ್ರಸಂಗ ನಾಟಕ ನಡೆಯಲಿದೆ. ಜ. 26ರಂದು ಸದಭಿರುಚಿ ಶಿವಮೊಗ್ಗ ತಂಡದಿಂದ ಬೂಟು ಬಂದೂಕುಗಳ ನಡುವೆ ಹಾಗೂ ಸಮೀರ ಸಮೂಹ ಶಿವಮೊಗ್ಗ ತಂಡದಿಂದ ಕುಮಾರವ್ಯಾಸ ನಾಟಕ ಪ್ರದರ್ಶನವಿದೆ. ಜ.27ರಂದು ಜೈ ಕರ್ನಾಟಕ ಕಲಾ ರಂಗ ಶಿಕಾರಿಪುರ ತಂಡದಿಂದ ಗೀಗಿ ಪದ, ಸೋಬಾನೆ, ಲಾವಣಿ ಪದಗಳು ಹಾಗೂ ನೀನಾಸಂ ರಂಗ ಸಮೂಹ ಹೆಗ್ಗೋಡು ತಂಡದಿಂದ ದೊರೆ ಈಡಿಪಸ್ ನಾಟಕ ಪ್ರದರ್ಶನ ನಡೆಯಲಿದೆ. ಪ್ರದರ್ಶನ ಉಚಿತವಾಗಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ವೀಕ್ಷಿಸುವಂತೆ ಜಿಲ್ಲಾಧಿಕಾರಿ ಅವರು ಮನವಿ ಮಾಡಿದ್ದಾರೆ.
ಕೃಪೆ : ಕರ್ನಾಟಕ ವಾರ್ತೆ.

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments