
ಮುಂಬೈ: ಮುಂಬೈ ಮೇಲೆ ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರರು ದಾಳಿ ನಡೆಸಿ ಇಂದಿಗೆ 10 ವರ್ಷಗಳು ಕಳೆದಿವೆ. ಸತತ ಮೂರು ದಿನಗಳ ಕಾಲ ಮುಂಬೈ ಮಹಾನಗರಿ ಉಗ್ರರ ಕಪಮುಷ್ಠಿಯಲ್ಲಿ ನಲುಗಿತ್ತು. 26/11 ಎಂದು ಈ ಭೀಕರ ದಾಳಿ ನಾಮಕರಣಗೊಂಡಿದೆ. ಬೋಟ್ ಮೂಲಕ ಸಮುದ್ರ ಮಾರ್ಗವಾಗಿ ಬಂದ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಸಂಘಟನೆಯ 10 ಉಗ್ರರು ಇಂಡಿಯಾ ಗೇಟ್ ಮೂಲಕ ಭಾರತ ಪ್ರವೇಶಿಸಿದ್ದರು.ನಂತರ ತಾಜ್ ಹೊಟೇಲ್‍ನಲ್ಲಿ ಅವಿತು ನ.26 ರಿಂದ ನ.29ರವರೆಗೂ ನಿರಂತರ ದಾಳಿ ನಡೆಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್, ಓಬೇರಾಯ್ ಟ್ರಿಡೆಂಟ್, ತಾಜ್‍ಮಹಲ್ ಅಂಡ್ ಟವರ್, ಲಿಯೋಪೊೀಲ್ಡ್ ಕೆಫೆ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ಜೆವಿಶ್ ಕಮ್ಯೂನಿಟಿ ಸೆಂಟರ್ ಭಯೋತ್ಪಾದಕರ ದಾಳಿಗೆ ತುತ್ತಾಗಿತ್ತು. 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರನ್ನು ಭಯೋತ್ಪಾದಕರು ಬಲಿ ಪಡೆದಿದ್ದರು.300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಭಯೋತ್ಪಾದಕರ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿತ್ತು..
ದಾಳಿ ವಿಚಾರ ತಿಳಿಯುತ್ತಲೇ ಜನರ ರಕ್ಷಣೆಗೆ ಆಗಮಿಸಿದ್ದ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಮುಖ್ಯಸ್ಥೆ ಹೇಮಂತ್ ಕರ್ಕರೆ, ಸೇನೆಯ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮುಖ್ಯ ಹೆಚ್ಚುವರಿ ಪೊಲೀಸ್ ಕಮಿಷನರ್ ಅಶೋಕ್ ಕಾಮ್ಟೆ ಮತ್ತು ಹಿರಿಯ ಪೊಲೀಸ್ ಇನ್ಸ್‍ಪೆಕ್ಟರ್ ವಿಜಯ್ ಸಾಲಸ್ಕರ್ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದವರಲ್ಲಿ ಪ್ರಮುಖರಾಗಿದ್ದಾರೆ.ಇದೇ ವೇಳೆ ಪೊಲೀಸ್ ಪೇದೆ ತುಕಾರಾಮ್ ಕಸಬ್’ನ ಮೇಲೆ ಗುಂಡು ಹಾರಿಸಿ, ಆತ ಸಿಕ್ಕಿಬೀಳುವಂತೆ ಮಾಡಿದ್ದರು. ಕಸಬ್ ನನ್ನು 4 ವರ್ಷಗಳ ನಂತರ 2012ರ ನವೆಂಬರ್ .21 ರಂದು ಪುಣೆಯ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.
C News TV Kannada News Online in cnewstv