ಭಾನುವಾರ ರಾತ್ರಿ ಹೊಲದಲ್ಲಿ ಬೀಡು ಬಿಟ್ಟಿದ್ದ ಕುರಿ ಮಂದೆಗೆ ಸಿಡಿಲು ಹೊಡೆದ ಪರಿಣಾಮ 250ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ಸೊರಬ ತಾಲೂಕಿನ ಗುಡ್ಡೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಡಕಳ ಗ್ರಾಮದ ಕಲ್ಲಪ್ಪ ಎಂಬುವರು ತಮ್ಮ ಕುರಿ ಮಂದೆಯನ್ನು ಮೇಯಿಸಲು ಸೊರಬ ತಾಲೂಕಿಗೆ ಬಂದಿದ್ದರು. ಭಾನುವಾರ ಕುರಿಗಳನ್ನು ಮೇಯಿಸಿ ರಾತ್ರಿ ಹೊಲವೊಂದರಲ್ಲಿದ್ದ ಮರದ ಕೆಳಗೆ ಕುರಿಗಳನ್ನು ತರುಬಿದ್ದರು.ಈ ವೇಳೆ ಗುಡುಗು ಸಿಡಿಲು ಸಹಿತ ಮಳೆ ಆರಂಭಗೊಂಡಿದ್ದು, ಕುರಿ ಮಂದೆಗೆ ಸಿಡಿಲು ಬಡಿದಿದೆ. ಇದರಿಂದಾಗಿ 250 ಕುರಿಗಳು ಮೃತಪಟ್ಟರೆ 150 ಕ್ಕೂ ಹೆಚ್ಚು ಕುರಿಗಳು ಗಾಯಗೊಂಡಿವೆ. ಸ್ಥಳಕ್ಕೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
C News TV Kannada News Online in cnewstv