Breaking News

ಶಿವಪ್ಪ ನಾಯಕ ವೃತ್ತದಲ್ಲಿ ಇಡ್ಲಿ, ಬಾಳೆಹಣ್ಣು ತಿನ್ನೋ ಸ್ಪರ್ಧೆ.‌

Cnewstv | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಪ್ಪ ನಾಯಕ ವೃತ್ತದಲ್ಲಿ ಇಡ್ಲಿ, ಬಾಳೆಹಣ್ಣು ತಿನ್ನೋ ಸ್ಪರ್ಧೆ.‌

ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ಯಿಂದ ಆಹಾರ ದಸರಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.‌

ತಿನ್ನೋ ಸ್ಪರ್ಧೆಗೆ ಯುವಕ – ಯುವತಿಯರು ಮುಗಿ ಬಿದ್ದಿದರು. ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಇಡ್ಲಿ, ಬಾಳೆಹಣ್ಣು ತಿನ್ನೋ ಸ್ಪರ್ಧೆ.‌ ಟೇಬಲ್ ಮೇಲೆ ತಟ್ಟೆಯಲ್ಲಿ ಇಡ್ಲಿ, ಬಾಳೆಹಣ್ಣು ತುಂಬಿ ಸ್ಪರ್ಧಿಗಳ ಎದುರಿಟ್ಟು ಸ್ಪರ್ಧೆ.‌

1 ನಿಮಿಷದಲ್ಲಿ ಯಾರು ಹೆಚ್ಚು ಇಡ್ಲಿ ತಿನ್ನುತ್ತಾರೋ ಅವರೇ ವಿಜೇತರು.

ಇಡ್ಲಿ, ಬಾಳೆಹಣ್ಣು ತಿನ್ನಲು ಕಾತುರರಾಗಿದ್ದ ಸ್ಪರ್ಧಿಗಳು ತೀರ್ಪುಗಾರರಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಬಾಯಗಲಿಸಿ ಬಾಯಲ್ಲಿ ತುರುಕಿದ್ದೋ ತುರುಕಿದ್ದು.

2 ನಿಮಿಷದಲ್ಲಿ 10 ಇಡ್ಲಿ ತಿಂದು ಎಲ್.ರಾಕೇಶ್ ಗೌಡ ಪ್ರಥಮ ಸ್ಥಾನ ಗಳಿಸಿದರೇ , 5.5 ಇಡ್ಲಿ ತಿಂದ ಪವರ್ ಮ್ಯಾಬ್ ಸಂದೀಪ ೨ನೇ ಸ್ಥಾನ ಹಾಗೂ ಮತ್ತೊಬ್ಬ ಪವರ್ ಮ್ಯಾನ್ ಈ.ಸುಮೀತ್ ಸಾಗರ್ 4.75 ಇಡ್ಲಿ ತಿಂದು ೩ನೇ ಸ್ಥಾನ

ಹಾಗೆಯೇ ಬಾಳೆಹಣ್ಣು ತಿನ್ನೋ ಸ್ಪರ್ಧೆಯಲ್ಲಿ ಮೆಸ್ಕಾಂ ಸಹಾಯಕ ಲೆಕ್ಕಾಧಿಕಾರಿ ಎಲ್.ಜಾನಕಿ ೨ ನಿಮಿಷದಲ್ಲಿ ೮ ಬಾಳೆಹಣ್ಣು ತಿಂದು ಪ್ರಥಮ ಸ್ಥಾನ, ೨ ನಿಮಿಷದಲ್ಲಿ ೮.೮೫ ಬಾಳೆಹಣ್ಣು ತಿಂದ ಪಿ.ವಿಶಾಲಾಕ್ಷಿ ೨ನೇ ಸ್ಥಾನ ಹಾಗೂ ೨ ನಿಮಿಷದಲ್ಲಿ ೮ ಬಾಳೆಹಣ್ಣು ತಿಂದ ಶಾಂತಮ್ಮ ೩ನೇ ಸ್ಥಾನ ಪಡೆದರು

೨ ನಿಮಿಷದಲ್ಲಿ ಗರಿಷ್ಠ ಸಂಖ್ಯೆಯ ಇಡ್ಲಿ ಮತ್ತು ಬಾಳೆಹಣ್ಣು ತಿನ್ನುವ ಷರತ್ತು ವಿಧಿಸಲಾಗಿತ್ತು

ಎರಡೂ ವಿಭಾಗದಲ್ಲಿ ಸುಮಾರು 30 ಯುವಕ- ಯುವತಿಯರು ಪಾಲ್ಗೊಂಡಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*