Cnewstv / 07.09.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಗಣೇಶೋತ್ಸವ : ಡೊಳ್ಳು ಹೊಡೆಯುವ ವಿಚಾರವಾಗಿ ಗಲಾಟೆ…
ಶಿವಮೊಗ್ಗ : ಗಣೇಶೋತ್ಸವದಲ್ಲಿ ಡೊಳ್ಳು ಹೊಡೆಯುವ ವಿಚಾರವಾಗಿ 2 ಗುಂಪುಗಳ ನಡುವೆ ಗಲಾಟೆಯಾಗಿದ್ದು, ಮಧ್ಯ ಪ್ರವೇಶಿಸಿದ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ.
ಭದ್ರಾವತಿ ತಾಲೂಕಿನ ಅರಬೆಳಚಿ ಕ್ಯಾಂಪಿನಲ್ಲಿ ಈ ಘಟನೆ ಸಂಭವಿಸಿದೆ. ನಟೇಶ್ ಕಾಲೋನಿ ಆದಿ ಕರ್ನಾಟಕದವರ ಗಣಪತಿ ಹಾಗೂ ಭೋವಿ ಜನಾಂಗದ ಸರ್ಕಲ್ ಗಣಪತಿ, ಇವೆರಡೂ ಗಣಪತಿ ಸಮಿತಿಯ ಸದಸ್ಯರು, ಒಂದೇ ಡೊಳ್ಳು ಬಾರಿಸುವ ತಂಡಕ್ಕೆ ಮುಂಗಡ ಹಣವನ್ನು ನೀಡಿದ್ದಾರೆ.
ಒಂದು ಕಡೆ ಡೊಳ್ಳು ಬಾರಿಸುತ್ತಿದ್ದ ಕಲಾವಿದರನ್ನು, ಇನ್ನೊಂದು ಸಮಿತಿಯ ಸದಸ್ಯರು ಮುಂಗಾಡ ಹಣ ನೀಡಿದರು ಯಾಕೆ ಡೊಳ್ಳು ಬಾರಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿ, ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಈ ವೇಳೆ ಎರಡು ಸಮಿತಿಯ ಸದಸ್ಯರ ನಡುವೆ ಮಾತಿನ ಚಕಮತಿಯಾಗಿ ಕೈ ಕೈ ಮಿಲಾಯಿಸಿದ್ದಾರೆ.
ಜಗಳ ಬಿಡಿಸಲು ಮಧ್ಯೆ ಪ್ರವೇಶಿಸಿದ ಪೊಲೀಸ್ ಪೇದೆಗಳಾದ ನಾಗರಾಜ್ ಹಾಗೂ ವಿಶ್ವ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಸುಮಾರು 15 ರಿಂದ 20 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಐದು ಗಣಪತಿಗಳನ್ನು ವಿಸರ್ಜನೆ ಮಾಡಲಾಗಿದೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಇದನ್ನು ಒದಿ..
C News TV Kannada News Online in cnewstv