Cnewstv / 02.09.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಶಿವಮೊಗ್ಗ : ಕಾರಾಗೃಹದಲ್ಲಿ ಕೈದಿಗಳ ದಿಢೀರ್ ಪ್ರತಿಭಟನೆ..
ಶಿವಮೊಗ್ಗ : ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಇಂದು ಬೆಳಗ್ಗೆ ಕೈದಿಗಳು ಧಿಡೀರ್ ಪ್ರತಿಭಟನೆ ಆರಂಭಿಸಿದ್ದರು.
ಹೌದು ಬೆಳಗಾವಿಯಲ್ಲಿ ನಡೆದ ಘಟನೆ ಬೆನ್ನಲ್ಲೇ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಶಿವಮೊಗ್ಗದ ಸೋಗಾನೆ ಬಳಿ ಇರುವ ಕೇಂದ್ರ ಕಾರಾಗೃಹದಲ್ಲಿ ಆವರಣದ ಬಳಿ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ..
ಬೆಳಗಿನ ಉಪಹಾರ ತಿರಸ್ಕರಿಸಿ, 500ಕ್ಕೂ ಹೆಚ್ಚು ಕೈದಿಗಳು ಬೀಡಿ, ಸಿಗರೇಟ್ ಮತ್ತು ಗುಟ್ಕಾ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನಾ ನಿರತ ಕೈದಿಗಳನ್ನು ಕಾರಾಗೃಹ ಸಿಬ್ಬಂದಿಗಳು ಸಮಾಧಾನಪಡಿಸಿದ್ದಾರೆ ಇನ್ನು
ಪ್ರತಿಭಟನಾನಿರತರಲ್ಲಿ ಹೆಚ್ಚಿನವರು ವಿಚಾರಣಾಧೀನ ಕೈದಿಗಳಾಗಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಇದನ್ನು ಒದಿ..
C News TV Kannada News Online in cnewstv