Breaking News

ಚಂದ್ರಶೇಖರ್ ಕುಟುಂಬದ ಪರವಾಗಿ ಹೋರಾಟ ಮಾಡಿದ್ದು, ಪರಿಹಾರ ಸಿಕ್ಕಿದ್ದು ಸಂತೋಷ ಆಗಿದೆ.

Cnewstv / 23.09.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಚಂದ್ರಶೇಖರ್ ಕುಟುಂಬದ ಪರವಾಗಿ ಹೋರಾಟ ಮಾಡಿದ್ದು, ಪರಿಹಾರ ಸಿಕ್ಕಿದ್ದು ಸಂತೋಷ ಆಗಿದೆ.

ಶಿವಮೊಗ್ಗ : ವಾಲ್ಮೀಕಿ ನಿಗಮದ ಮೃತ ಚಂದ್ರಶೇಖರ್ ಕುಟುಂಬದ ಪರವಾಗಿ ಹೋರಾಟ ಮಾಡಿದ್ದು ಪರಿಹಾರ ಸಿಕ್ಕಿದ್ದು ಸಂತೋಷ ಆಗಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನೀಡಿದ್ದಾರೆ.

ವಾಲ್ಮೀಕಿ ನಿಗಮದ ಮೃತ ಚಂದ್ರಶೇಖರ್ ಮನೆಗೆ ಭೇಟಿ ನೀಡಿ ನಂತರ ಮಾತನಾಡಿದ ಅವರು, ಚಂದ್ರಶೇಖರ್ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷದ ಪರಿಹಾರ ನೀಡದಿದ್ದರೆ ಸೆಪ್ಟೆಂಬರ್ 20ರ ನಂತರ ಜೈಲ್ ಭರೋ ಚಳುವಳಿ ಮಾಡುವುದಾಗಿ ಹೇಳಿದ್ದೆ. ನಾಳೆ ಸಿಎಂ ಕಚೇರಿಯಲ್ಲಿ ಚಂದ್ರಶೇಖರ್ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಲಿದ್ದಾರೆ.

ಅಟ್ರಾಸಿಟಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 8.25 ಲಕ್ಷ ರೂ ಪರಿಹಾರ ನೀಡಲಿದ್ದಾರೆ. ನಾಳೆ ಈ ಹಣ ಕೂಡ ಜಿಲ್ಲಾಧಿಕಾರಿಗಳ ಮೂಲಕ ಚಂದ್ರಶೇಖರ್ ಪತ್ನಿ ಕವಿತಾ ಅಕೌಂಟ್ ಗೆ ಜಮಾ ಆಗಲಿದೆ. ಚಂದ್ರಶೇಖರ್ ಪುತ್ರ ನಿಗೆ ಅನುಕಂಪ ಆಧಾರಿತ ನೌಕರಿಯನ್ನು ಸರ್ಕಾರ ನೀಡಲಿ. .

ರಾಷ್ಟ್ರಭಕ್ತ ಬಳಗದಿಂದ ಚಂದ್ರಶೇಖರ್ ಕುಟುಂಬದ ಪರವಾಗಿ ಹೋರಾಟ ಮಾಡಿದ್ದು ಪರಿಹಾರ ಸಿಕ್ಕಿದ್ದು ಸಂತೋಷ ಆಗಿದೆ ಎಂದರು..

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಇದನ್ನು ಒದಿ…

Leave a Reply

Your email address will not be published. Required fields are marked *

*