Cnewstv / 16.07.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ತುಂಬಿದ ತುಂಗೆ.. ಮುಳುಗಿದ ಮಂಟಪ..
ಶಿವಮೊಗ್ಗ : ತುಂಬಾ ಜಲಾಶಯದಿಂದ ಬಾರಿ ಪ್ರಮಾಣದ ನೀರನ್ನ ಹೊಳೆಗೆ ಬಿಡಲಾಗಿದ್ದು ಶಿವಮೊಗ್ಗದ ತುಂಗಾ ನದಿ ಮೈದುಂಬಿಹರಿಯುತ್ತಿದೆ.
ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಇಂದು ಜಿಲ್ಲಾಧಿಕಾರಿಗಳು ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದಾರೆ. ಗಾಜನೂರಿನ ತುಂಗಾ ಅಣೆಕಟ್ಟಿಗೆ 61,757 ಕ್ಯೂಸೆಕ್ ಒಳಹರಿವಿದ್ದು, ಅಷ್ಟೇ ಪ್ರಮಾಣದ ನೀರನ್ನ ಜಲಾಶಯದಿಂದ ಹೊರ ಬಿಡಲಾಗುತ್ತಿದೆ..
ಶಿವಮೊಗ್ಗ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರವಿರುವ ಕೋರ್ಪಲ್ಲಯ್ಯನ ಛತ್ರದ ಮಂಟಪ ಒಳಗಡೆಯಾಗಿದೆ. ಈ ವರ್ಷದಲ್ಲಿ ಮೊದಲ ಬಾರಿಗೆ ಮಂಟಪ ಮುಳುಗಡೆಯಾಗಿದೆ. ತುಂಬಿ ಹರಿಯುತ್ತಿರುವ ತುಂಗಾ ನದಿಯನ್ನು ನೋಡಲು ಫೋಟೋ ತೆಗೆಯಲು ಹಳೇ ಸೇತುವೆ ಮೇಲೆ ಜನರು ಜಮಾಯಿಸುತ್ತಿದ್ದಾರೆ..
ಇದನ್ನು ಒದಿ..
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments