Breaking News

ಶಿವಮೊಗ್ಗ : ಝಿಂಕಾ ವೈರಸ್ ಗೆ ವೃದ್ದ ಬಲಿ… ಸಾಗರದ 24 ವರ್ಷದ ಯುವಕನಲ್ಲಿ ವೈರಸ್ ಪತ್ತೆ

Cnewstv / 06.07.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಶಿವಮೊಗ್ಗ : ಝಿಂಕಾ ವೈರಸ್ ಗೆ ವೃದ್ದ ಬಲಿ…ಸಾಗರದ 24 ವರ್ಷದ ಯುವಕನಲ್ಲಿ ವೈರಸ್ ಪತ್ತೆ

ಶಿವಮೊಗ್ಗ : ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಭೀತಿಯ ನಡುವೆ ಝಿಂಕಾ ಪತ್ತೆಯಾಗಿದೆ. ಶಿವಮೊಗ್ಗದಲ್ಲಿ ಝಿಂಕಾ ವೈರಸ್ ಗೆ ಚಿಕಿತ್ಸೆ ಪಡೆದು ಗುಣಮುಖರಾದ ವೃದ್ಧ ಸಾವನ್ನಪ್ಪಿದ್ದಾರೆ.

ಶಿವಮೊಗ್ಗದ ಗಾಂಧಿ ನಗರದ ನಿವಾಸಿ 74 ವರ್ಷದ ವೃದ್ಧ ಮನೆಯಲ್ಲಿ ಸಾವು ಕಂಡಿದ್ದಾರೆ .ಜೂ. 19 ರಂದು ತೀವ್ರ ಜ್ವರದಿಂದ ಬಳಲುತ್ತಿದ್ದರು.ಜೂ. 21 ರಂದು ಝಿಕಾ ವೈರಸ್ ಪತ್ತೆ ಆಗಿತ್ತು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದಿದ್ದರು. ಗುಣಮುಖರಾಗಿ ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ವಾಪಾಸ್ ಆಗಿದ್ದರು.ಆದರೆ ಗುಣಮುಖರಾದವರು ಶುಕ್ರವಾರವ ಮನೆಯಲ್ಲಿ ಸಾವುಕಂಡಿದ್ದಾರೆ. ಜ್ವರ ಮಾತ್ರವಲ್ಲದೇ ವಿವಿದ ಕಾಯಿಲೆಯಿಂದ ಅವರು ಬಳಲುತ್ತಿದ್ದರು ಎನ್ನಲಾಗಿದೆ.
ಸಾಗರ

ಸಾಗರ ಮೂಲದ 24 ವರ್ಷದ ಯುವಕನೋರ್ವನಲ್ಲಿ ಝಿಂಕಾ ವೈರಸ್ ಪತ್ತೆಯಾಗಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ…

Leave a Reply

Your email address will not be published. Required fields are marked *

*