Breaking News

ಹಾವೇರಿಯ ಬ್ಯಾಡಗಿ ಟಿಟಿ ಅಪಘಾತದಲ್ಲಿ ಮಸಣ ಸೇರಿದ ಅಂಧ‌ ಸಾಧಕಿ ಮಾನಸ..

Cnewstv / 28.06.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಹಾವೇರಿಯ ಬ್ಯಾಡಗಿ ಟಿಟಿ ಅಪಘಾತದಲ್ಲಿ ಮಸಣ ಸೇರಿದ ಅಂಧ‌ ಸಾಧಕಿ ಮಾನಸ..

ಶಿವಮೊಗ್ಗ : ಇಂದು ಬೆಳಗಿನ ಜಾವ ಹಾವೇರಿಯ ಬ್ಯಾಡಗಿಯ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದಂತಹ ಭೀಕರ ಟಿಟಿ ಅಪಘಾತದಲ್ಲಿ ಭದ್ರಾವತಿ ಎಮ್ಮೆಹಟ್ಟಿ ಗ್ರಾಮದ 12 ಜ‌ನ ಸೇರಿದಂತೆ ಅಂಧ ಪ್ರತಿಭಾನ್ವಿತ ಮಾನಸ ಮೃತಪಟ್ಟಿದ್ದಾರೆ.

15 ದಿನಗಳ ಹಿಂದೆ ಅಷ್ಟೇ ಟಿಟಿಯನ್ನ ಖರೀದಿಸಿದ್ದು ಈ ಹಿನ್ನೆಲೆಯಲ್ಲಿ ತಂದೆ ತಾಯಿ ಹಾಗೂ ಕುಟುಂಬಸ್ಥರೊಂದಿಗೆ ದೇವರ ದರ್ಶನಕ್ಕೆ ತೆರಳಿದವರು ಮಸಣವನ್ನು ಸೇರಿದ್ದಾರೆ.

ಮಾನಸ ಹುಟ್ಟು ಕುರುಡಿ ಆದರೆ ಆಕೆ ಸಾಧನೆಯನ್ನ ಪ್ರಪಂಚವೇ ನೋಡಬೇಕು ಎಂಬ ಮಹದಾಸೆ ಹೊತ್ತವಳು. ಭಾರತದ ಅಂಧರ ಫುಟ್ಬಾಲ್ ತಂಡದ ನಾಯಕಿಯಾಗಿದ್ದಳು. ಪಂಜಾಬ್ ಹಾಗೂ ದೆಹಲಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕರ್ನಾಟಕದ ಅಂಧರ ಬಾಲಕಿಯರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದರು. IAS ಮಾಡಬೇಕು ಎಂದುಕೊಂಡಿದ್ದರು. ಆದರೆ ವಿಧಿಯ ಆಟವೇ ಬೇರೆ ಇತ್ತು ಇಂದು ನಡೆದಂತಹ ಅಪಘಾತದಲ್ಲಿ ಭಾರತವನ್ನು ಪ್ರತಿನಿಧಿಸಬೇಕಾಗಿದ್ದ ಕ್ರೀಡಾ ಪ್ರತಿಭೆ ಅರಳುವ ಮೊದಲು ಬಾಡಿ ಹೋಗಿದೆ..

ಇಂದು ಇಡೀ ಎಮ್ಮೆಹಟ್ಟಿ ಗ್ರಾಮದಲ್ಲಿ ನೀರವ ಮೌನ. ಗ್ರಾಮದ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇಂದು ಸಂಜೆ ಹಿಂದು ರುದ್ರ ಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ. ತಮ್ಮವರನ್ನು ಕಳೆದುಕೊಂಡ ಸಂಬಂಧಿಸಿದ ದುಃಖ ಮುಗಿಲು ಮುಟ್ಟಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ…

 

Leave a Reply

Your email address will not be published. Required fields are marked *

*