Breaking News

ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತ, ಭದ್ರಾವತಿ ಮೂಲದ 10 ಕ್ಕು ಹೆಚ್ಚು ಜನರ ಸಾವು.

Cnewstv / 28.06.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತ 10 ಕ್ಕು ಹೆಚ್ಚು ಜನರ ಸಾವು.

ಹಾವೇರಿ : ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು, 10 ಕ್ಕು ಹೆಚ್ಚು ಜನರ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಹತ್ತಿರದ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಬೆಳಗಿನಾ ಜಾವ 3.30 ರ ಸಮಯಕ್ಕೆ ಹಿಂದಿನಿಂದ ಟಿಟಿ ವಾಹನ ಗುದ್ದಿದೆ. ಅಪಘಾತದಿಂದ ಟಿಟಿ ವಾಹನ ಅಪ್ಪಚ್ಚಿಯಾಗಿದೆ.‌ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಹೊರ ತೆಗೆದ್ದಿದ್ದಾರೆ.‌

ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರು. ಬೆಳಗಾವಿ ಜಿಲ್ಲೆಯ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ, ಭದ್ರಾವತಿಗೆ ಮರಳಿ ಹೋಗುತ್ತಿರುವಾಗ ಈ ಆಪಘಾತ ನಡೆದಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 

ಇದನ್ನು ಒದಿ..

Leave a Reply

Your email address will not be published. Required fields are marked *

*