Cnewstv / 18.06.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಸ್ಮಶಾನದಲ್ಲೇ ಕಲ್ಲು ಎತ್ತು ಹಾಕಿ ಕೊಲೆ..
ಶಿವಮೊಗ್ಗ : ಸ್ಮಶಾನದಲ್ಲಿ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಚುಚ್ಚಿ ಕಲ್ಲು ಎತ್ತು ಹಾಕಿ ಕೊಲೆ ಮಾಡಲಾಗಿದೆ.
ನಗರದ ಹೊರವಲಯ ಆಯನೂರು ಗೇಟು ಸಮೀಪದಲ್ಲಿರುವ ಸ್ಮಶಾನದಲ್ಲಿ ನೆನ್ನೆ ರಾತ್ರಿ ರಾಜು ಹಾಗೂ ವಿಕ್ರಂ ಎಂಬುವವರು ಕುಡಿಯಲು ಹೋಗಿದ್ದಾರೆ. ಕುಡಿತದ ನಶೆಯಲ್ಲಿದ್ದ ಇಬ್ಬರ ನಡುವೆ ಜಗಳವಾಗಿದೆ. ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಈ ವೇಳೆ ರಾಜುರಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ ನಂತರ ಅವನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಇದನ್ನು ಒದಿ…
C News TV Kannada News Online in cnewstv