Breaking News

ಅವರು ಹಾಕೊಟ್ಟ ಸಂಕಲ್ಪವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ – ಸಂಸದ ಬಿ ವೈ ರಾಘವೇಂದ್ರ.

Cnewstv / 17.06.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಅವರು ಹಾಕೊಟ್ಟ ಸಂಕಲ್ಪವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ – ಸಂಸದ ಬಿ ವೈ ರಾಘವೇಂದ್ರ.

ಶಿವಮೊಗ್ಗ : ಭಾನುಪ್ರಕಾಶ್ ಅವರ ಸಾವಿನ ಸುದ್ದಿ ಕೇಳಿ ಆತಂಕ ಆಗಿದೆ. ಅವರು ಹಾಕೊಟ್ಟ ಸಂಕಲ್ಪವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿಕೆ.

ಇಂದು ಮತ್ತೂರಿನಲ್ಲಿ ಭಾನುಪ್ರಕಾಶ್ ರವರ ಅಂತಿಮ ದರ್ಶನವನ್ನು ಪಡೆದು, ಮಾಧ್ಯಮದವರೊಂದಿಗೆ ಮಾತನಾಡಿದ ಬಿ ವೈ ರಾಘವೇಂದ್ರ ಅವರು ಭಾನುಪ್ರಕಾಶ್ ಅವರು ಇಂದು ನಮ್ಮನ್ನೆಲ್ಲಾ ಅಗಲಿರೋದು ಸಾವಿರಾರು ಕಾರ್ಯಕರ್ತರು, ಕುಟುಂಬಕ್ಕೆ ದೊಡ್ಡ ನಷ್ಟ. ಅವರ ಸಾವಿನ ಸುದ್ದಿ ಕೇಳಿ ಆತಂಕ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕೊಡಲಿ. ಅವರ ಕುಟುಂಬದವರ ಜೊತೆ ನಾವೆಲ್ಲಾ ಇರುತ್ತೇವೆ.

ಕಳೆದ ಐದಾರು ತಿಂಗಳಿಂದ ಲೋಕಸಭಾ ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ದರು. ಐದಾರು ಕ್ಷೇತ್ರದ ಜವಾಬ್ದಾರಿ ಭಾನುಪ್ರಕಾಶ್ ಅವರಿಗೆ ಕೊಟ್ಟಿದ್ದರು. ಕೊಟ್ಟಂತಹ ಎಲ್ಲಾ ಕ್ಷೇತ್ರ ಗೆಲ್ಲಿಸಿಕೊಂಡು ಬಂದರು. ಅವರ ಈಡಿ ಕುಟುಂಬ ಸಮಾಜಕ್ಕೆ ಮೀಸಲಾಗಿಟ್ಟಿದೆ. ಅವರ ಸಾವು ಸಂಘಟನೆಗೆ ತುಂಬಲಾರದ ನಷ್ಟವಾಗಿದೆ ಎಂದರು.

ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಗುತ್ತಿತ್ತು ಈ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದಂತಹ ಮಾಜಿ ವಿಧಾನಪರಿಷತ್ ಸದಸ್ಯರಾದ ಭಾನುಪ್ರಕಾಶ್ ಅವರಿಗೆ ತೀವ್ರವಾದ ಎದೆ ನೋವು ಕಾಣಿಸಿಕೊಂಡಿದೆ ತಕ್ಷಣವೇ ಅವರನ್ನು ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಇದನ್ನು ಒದಿ..

Leave a Reply

Your email address will not be published. Required fields are marked *

*