Cnewstv / 10.06.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ರಾಜ್ಯದಲ್ಲಿ ಒಬ್ಬ ಮಾತ್ರ ಸ್ಯಾಡಿಸ್ಟ್ ಇದ್ದಾನೆ. ಸಮಾಜದಲ್ಲಿ ಅವನನ್ನು ರಿಪೇರಿ ಮಾಡಲು ಆಗಲ್ಲ.
ಶಿವಮೊಗ್ಗ: ರಾಜ್ಯದಲ್ಲಿ ಒಬ್ಬ ಮಾತ್ರ ಸ್ಯಾಡಿಸ್ಟ್ ಇದ್ದಾನೆ. ಸಮಾಜದಲ್ಲಿ ಅವನನ್ನು ರಿಪೇರಿ ಮಾಡಲು ಆಗಲ್ಲ. ಮಾಜಿ ಸಿಎಂ ಎಸ್.ಬಂಗಾರಪ್ಪ ಅವರಿಂದಲೇ ಅವನನ್ನು ಸರಿ ಮಾಡಲು ಆಗಲಿಲ್ಲ. ನಾವು, ನೀವು ಪ್ರಯತ್ನಪಟ್ಟರೂ ರಿಪೇರಿ ಮಾಡಲು ಸಾಧ್ಯವಾಗಲಿಲ್ಲ ಎಂದು ಸಹೋದರ, ಮಾಜಿಸಚಿವ ಕುಮಾರ್ ಬಂಗಾರಪ್ಪ ವಿರುದ್ಧ ಸಚಿವ ಮಧು ಬಂಗಾರಪ್ಪ ನೇರವಾಗಿ ಕಿಡಿಕಾರಿದರು.
ನಗರದ ಈಡಿಗರ ಭವನದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ನಿಂದ ಲೋಕಸಭೆ ಚುನಾವಣೆ ಸೋಲಿನ ಹಿನ್ನಲೆಯಲ್ಲಿ ಮತದಾರರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಗ್ಯಾರಂಟಿಯಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ ಭ್ರಷ್ಟಾಚಾರದಿಂದ ಬಿಜೆಪಿ ಸರ್ಕಾರ ಮನೆಗೆ ಹೋಗಿದೆ ಎಂಬುದನ್ನು ಚುನಾವಣೆಯಲ್ಲಿ ಮತದಾರರಿಗೆ ಹೇಳಲು ವಿಫಲರಾಗಿದ್ದೇವೆ. ಅದೇ ಚುನಾವಣೆ ಸೋಲಿಗೆ ಕಾರಣವಾಗಿದೆ ಎಂದರು.
ನಾಯಕರು ಧೈರ್ಯದಿಂದ ಮತ ಕೇಳಿದ್ದು ಇದೇ ಚುನಾವಣೆಯಲ್ಲಿ ಎಂಬುದು ವಿಶೇಷ. ಸರ್ಕಾರ ನಮ್ಮದೇ ಇದೆ. ಒಗ್ಗಟ್ಟಾಗಿ ಮಾಡಿಕೊಂಡು ಹೋಗಬೇಕಿದೆ. ತಪ್ಪು ಮಾಡಿದ್ದರೆ ತಿಳಿಸಬೇಕು. ತಿದ್ದುಕೊಂಡು ಹೋಗುತ್ತೇವೆ. ಅಭಿವೃದ್ಧಿ ಕೆಲಸಗಳು ಆಗುತ್ತವೆ. ಅದರ ಬಗ್ಗೆ ಅನುಮಾನ ಬೇಡ ಎಂದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಇದನ್ನು ಒದಿ..
C News TV Kannada News Online in cnewstv