Breaking News

ಯಾರಾದರೂ ಒಬ್ಬರು ಗೆಲ್ಲಲೇಬೇಕು, ಅದು ಆಗಿದೆ. ನಮಗೆ ಯಾರು ಶತ್ತುಗಳಲ್ಲ.

Cnewstv / 10.06.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಯಾರಾದರೂ ಒಬ್ಬರು ಗೆಲ್ಲಲೇಬೇಕು, ಅದು ಆಗಿದೆ. ನಮಗೆ ಯಾರು ಶತ್ತುಗಳಲ್ಲ.

ಶಿವಮೊಗ್ಗ : ಲೋಕಸಭಾ ಚುನಾವಣೆ ಸೋಲಿನ ಬಳಿಕ ಕ್ಷೇತ್ರಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಇಂದು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು..ಕೃತಜ್ಞತಾ ಸಭೆ ಇದೆ ಸಭೆಗೆ ಬಂದಿದ್ದೇನೆ. ಯಾರಾದರೂ ಒಬ್ಬರು ಗೆಲ್ಲಲೇಬೇಕು ಅದು ಆಗಿದೆ. ನಾನು ಅಂದುಕೊಂಡಂತೆ ಆಗಿಲ್ಲ. ಐದು ಲಕ್ಷ ಮತದಾರರು ಮತ ನೀಡಿದ್ದಾರೆ. ನಾವು ಚುನಾವಣೆಯಲ್ಲಿ ಮಾಡಬೇಕಾದ ಕೆಲಸ ಮಾಡಿದ್ದೇವೆ. ಜನ ಸಪೋರ್ಟ್ ಮಾಡಿದ್ದಾರೆ. ರಾಘವೇಂದ್ರ ಗೆದ್ದಿದ್ದಾರೆ ಅವರಿಗೆ ಶುಭಾಶಯ ಹೇಳುತ್ತೇನೆ. ಒಳ್ಳೆಯ ಕೆಲಸ ಮಾಡಿಕೊಂಡು ಹೋಗಲಿ. ಶಿವಮೊಗ್ಗ ಜನರ ಜೊತೆಯಲ್ಲಿ ಇರ್ತೇನೆ. ಶಿವಮೊಗ್ಗ ಬಿಟ್ಟು ಹೋಗುವ ಪ್ರಶ್ನೆ ಇಲ್ಲ. ಶಿವಮೊಗ್ಗದಲ್ಲಿ ಮನೆ ಮಾಡುತ್ತೇನೆ. ಸೋಲಬಾರದಾಗಿತ್ತು ಸೋತಿದ್ದೇವೆ. ಕಳೆದ ಬಾರಿಗಿಂತ ಈ ಬಾರೀ ಹೆಚ್ಚಿನ ಮತ ತಗೊಂಡಿದ್ದೇನೆ. ಸೋಲಿನ ಹೊಣೆ ಯಾರು ತಗೊಳೊದಿಲ್ಲ. ನಾವು ಯಾರು ತಪ್ಪು ಮಾಡಿಲ್ಲ. ನನ್ನ ಕ್ಕಿಂತ ಹೆಚ್ಚು ಕೆಲಸ ಮಹಿಳೆಯರು ಮಾಡಿದ್ದಾರೆ. ನಾನು ಗೆಲ್ಲುವ ವಿಶ್ವಾಸ ಇತ್ತು ಆದರೆ ಸೋಲಾಗಿದೆ ಎಂದ ದೊಡ್ಮನೆ ಸೋಸೆ ಎಂದರು. 

ಚುನಾವಣಾ ಸೋಲಿ‌ನ ಬಗ್ಗೆ ನಾನು ಏನು ಮಾತಾಡಲ್ಲ. ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಗೆಲ್ಲುತ್ತೇವೆ ಅಂದುಕೊಂಡಿದ್ದೇವು. ಯಾರಾದರೂ ಒಬ್ಬರು ಗೆಲ್ಲಬೇಕಿತ್ತು ಗೆದ್ದಿದ್ದಾರೆ. ನಮಗೆ ಯಾರು ಶತ್ತುಗಳಲ್ಲ.

– ಶಿವರಾಜ್ ಕುಮಾರ್, ನಟ

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

Leave a Reply

Your email address will not be published. Required fields are marked *

*