Cnewstv / 16.05.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಪಾಪಿಯೊಬ್ಬ ಪಾಪ್ಯುಲರ್ ಆಗಿದ್ದಾನೆ..
ಶಿವಮೊಗ್ಗ : ಪ್ರಜ್ವಲ್ ಹೆಸರು ರಾಷ್ಟ್ರವ್ಯಾಪಿ ಹೋಗಿದೆ. ಪಾಪಿಯೊಬ್ಬ ಪಾಪ್ಯುಲರ್ ಆಗಿದ್ದಾನೆ ಎಂದು ಸಾಗರ ಶಾಸಕ
ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಪೆನ್‌ಡ್ರೈವ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ಹೆಸರು ರಾಷ್ಟ್ರವ್ಯಾಪಿ ಹೋಗಿದೆ. ಪಾಪಿಯೊಬ್ಬ ಪಾಪ್ಯುಲರ್ ಆಗಿದ್ದಾನೆ
ಇದೇ ಪೆನ್‌ಡ್ರೈವ್ ಅನ್ನು ಸದನದ ಹೊರಗೆ ಕುಮಾರಸ್ವಾಮಿ ತೋರಿಸಿದ್ದರು. ಅದು ಪ್ರಜ್ವಲ್ ರೇವಣ್ಣ ಅವರದ್ದೆ ಇರಬೇಕು ಎಂಬ ಅನುಮಾನವಿದೆ. ಅವರೆ ಇದನ್ನು ಬಿಡುಗಡೆ ಮಾಡಿರಬಹುದು.ಸುಮ್ಮನೆ ಕಾಂಗ್ರೆಸ್ ಮೇಲೆ ಆರೋಪ ಮಾಡಬಾರದು ಎಂದರು.
ಗ್ಯಾರಂಟಿಯಿಂದ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂದಿದ್ದರು
ಆದರೆ ನಿಮ್ಮ ಕುಟುಂಬದ ಸದಸ್ಯ ದಾರಿ ತಪ್ಪಿದ್ದಾನೆ.
ಅವನನ್ನು ಏಕೆ ಈವರೆಗೆ ಬಂಧಿಸಿಲ್ಲ ? ಸಣ್ಣವರನ್ನು ಒದ್ದು ಒಳಗೆ ಹಾಕಿದಂತೆ, ಪ್ರಜ್ವಲ್‌ನನ್ನು ಒಳಗೆ ಹಾಕಬೇಕು. ಇನ್ನೂ ಈ ಬಗ್ಗೆ ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕಿರುವುದನ್ನು ನಾನು ಖಂಡಿಸುತ್ತೇನೆ ಎಂದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ…
C News TV Kannada News Online in cnewstv