Cnewstv / 08.05.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ನಡುರಸ್ತೆಯಲ್ಲೇ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ
ಶಿವಮೊಗ್ಗ : ಇಬ್ಬರು ರೌಡಿ ಶೀಟರ್ ರನ್ನು ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಹಾಡಹಗಲೇ ಗ್ಯಾಂಗ್ ವಾರ್ ನಡೆದಿದೆ. ನಡುರಸ್ತೆಯಲ್ಲೇ ಇಬ್ಬರು ರೌಡಿಶೀಟರ್ ಗಳನ್ನು ಮಾರಕಾಸ್ತ್ರ, ಚಪ್ಪಡಿ ಕಲ್ಲು, ಸೈಕಲ್ ಎತ್ತಿ ಹಾಕಿ ಲಷ್ಕರ್ ಮೊಹಲ್ಲಾ ಸರ್ಕಲ್ ನಲ್ಲಿ ಹತ್ಯೆ ಮಾಡಲಾಗಿದೆ.
ರೌಡಿ ಶೀಟರ್ ಯಾಸೀನ್ ಕುರೇಶಿ ಮೇಲೆ ಅಟ್ಯಾಕ್ ಮಾಡಿದ್ದ ಗ್ಯಾಂಗ್. ಯಾಸೀನ್ ಗೆ ಚಾಕುವಿನಿಂದ ಚುಚ್ಚಿರುವ ದುಷ್ಕರ್ಮಿಗಳ ಗುಂಪು. ಗಂಭೀರ ಗಾಯಗೊಂಡಿರುವ ಯಾಸೀನ್ ಕುರೇಶಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾಸೀನ್ ಮೇಲೆ ದಾಳಿ ಮಾಡಿರುವ ವೇಳೆ ಪ್ರತಿದಾಳಿ ಮಾಡಿರುವ ಯಾಸೀನ್ ಕುರೇಶಿ ಗ್ಯಾಂಗ್ ದಾಳಿಗೆ ಬಂದಿದ್ದ ಇಬ್ಬರು ರೌಡಿಶೀಟರ್ ಗಳು ಸ್ಥಳದಲ್ಲೇ ಬರ್ಬರ್ ಹತ್ಯೆ.
ಕೊಲೆ ಮಾಡಿ ಪರಾರಿಯಾದ ಕುರೇಶಿ ಗ್ಯಾಂಗ್ ನ ಯುವಕರು. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು,
ಸ್ಥಳದಲ್ಲಿ ಪೊಲೀಸ್ ಬೀಗಿ ಬಂದೋಬಸ್ತ್ ಮಾಡಲಾಗಿದೆ.
ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ…
C News TV Kannada News Online in cnewstv