Breaking News

ಅರಮನೆ ಅಂತ ಮತದಾನ ಕೇಂದ್ರ, ಮತದಾನ ಮಾಡಿದವರೇ ಪ್ರಭು…

Cnewstv / 07.05.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಅರಮನೆ ಅಂತ ಮತದಾನ ಕೇಂದ್ರ, ಮತದಾನ ಮಾಡಿದವರೇ ಪ್ರಭು…

ಶಿವಮೊಗ್ಗ : ಅರಮನೆ ಅಂತ ಮತದಾನ ಕೇಂದ್ರ, ಮತದಾನ ಮಾಡಿದವರೇ ಪ್ರಭು. ಪ್ರಾಚೀನ ಕಾಲದ ಉಡುಗೆ ತೊಟ್ಟ ಚುನಾವಣಾಧಿಕಾರಿಗಳು. ಹೌದು ಈ ರೀತಿಯಾದ ದೃಶ್ಯಗಳು ಕಂಡುಬಂದಿದ್ದು ಶಿವಮೊಗ್ಗ ಜಿಲ್ಲಾ ಪಂಚಾಯತ್ ಮತದಾನ ಕೇಂದ್ರದಲ್ಲಿ..

ಶಿವಮೊಗ್ಗದ ಜಿಲ್ಲಾ ಪಂಚಾಯತ್ ನ ಮತದಾನ ಕೇಂದ್ರದಲ್ಲಿ ವಿಭಿನ್ನ ಪ್ರಯತ್ನ ಮಾಡಲಾಗಿದೆ. ‌ಅರಮನೆಯಂತೆ ಮತದಾನ ಕೇಂದ್ರವನ್ನು ಅಲಂಕರಿಸಲಾಗಿದೆ. ಮತದಾರರೇ ಪ್ರಭು ಎಂಬ ಘೋಷಣೆಯೊಂದಿಗೆ ಮತದಾನಕ್ಕೆ ಬರುವವರಿಗೆ ಇಲ್ಲಿ ವಿಶೇಷ ವೆಲ್ ಕಂ ಮಾಡಲಾಗುತ್ತಿದೆ. ಮತದಾನ ನಂತರ ರಾಜ ಸಿಂಹಾಸದಲ್ಲಿ ಕುಳಿತು ಫೋಟೋ ವತೆಗೆಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ.‌ ಚುನಾವಣಾ ಅಧಿಕಾರಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹೊಸ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ…

Leave a Reply

Your email address will not be published. Required fields are marked *

*