Breaking News

ಯಡಿಯೂರಪ್ಪ ಮತ್ತು ರಾಘವೇಂದ್ರ ಅವರು ಸೋಲಿನ ಭಯದಿಂದ ತೊಂದರೆ ನೀಡಿದ್ದಾರೆ.

Cnewstv / 02.05.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಯಡಿಯೂರಪ್ಪ ಮತ್ತು ರಾಘವೇಂದ್ರ ಅವರು ಸೋಲಿನ ಭಯದಿಂದ ತೊಂದರೆ ನೀಡಿದ್ದಾರೆ.

ಶಿವಮೊಗ್ಗ : ಯಡಿಯೂರಪ್ಪ ಮತ್ತು ರಾಘವೇಂದ್ರ ಅವರು ಸೋಲಿನ ಭಯದಿಂದ ತೊಂದರೆ ನೀಡಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಶಿರಾಳಕೊಪ್ಪದಲ್ಲಿ ನಿನ್ನೆ ನಡೆದ ಘಟನೆ ಪ್ರಜಾಪ್ರಭುತ್ವಕ್ಕೆ ಹಿನ್ನಡೆಯಾಗಿದೆ. ಚುನಾವಣಾ ಆಯೋಗದ ಅನುಮತಿ ಪಡೆದುಕೊಂಡು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಂತರ ಕೆಲವು ಗೂಂಡಾಗಳು ತೊಂದರೆ ನೀಡಿದ್ದಾರೆ. ರಸ್ತೆಯಲ್ಲಿ ಸಾರ್ವಜನಿಕ ಸಭೆ ನಡೆಸಿದ್ದೇವೆ. ಗೂಂಡಾಗಿರಿ ಖಂಡಿಸುತ್ತೇವೆ. ಸೋಲಿನ ಭಯದಿಂದ ಯಡಿಯೂರಪ್ಪ ಕುತ್ರಂತ್ರ ರಾಜಕಾರಣ ಮಾಡುತ್ತಿದ್ದಾರೆ. ಶಿಕಾರಿಪುರದಲ್ಲಿ ಭಯದ ವಾತಾವರಣ ಇದೆ. ಅಪ್ಪಮಕ್ಕಳು ರಾಜ್ಯದ ಕ್ಷಮೆ ಕೇಳಬೇಕು.ಚುನಾವಣೆ ನ್ಯಾಯಯುತವಾಗಿ ನಡೆಸಬೇಕು. ಎಸ್ಪಿ-ಡಿಸಿ ಕ್ರಮ ಕೈಗೊಳ್ಳಬೇಕು.

ಸೋಲಿನ ಭಯದಿಂದ ಅಪ್ಪ‌ಮಕ್ಕಳು ರಾಷ್ಟ್ರ ಭಕ್ತರ ಚುನಾವಣಾ ಕಛೇರಿಗೆ ವಾಮಾಚಾರ ಮಾಡಿದ್ದಾರೆ.ಜನ ತಿರಸ್ಕಾರ ಮಾಡಿರುವುದು ಅಪ್ಪಮಕ್ಕಳ ಗಮನಕ್ಕೆ ಬಂದಿದೆ. ದೇವರು-ಧರ್ಮ ನನ್ನ ಬೆಂಬಲಕ್ಕೆ ಇದೆ.ವಾಮಾಚಾರ ಮಾಡುವ ಯಡಿಯೂರಪ್ಪ ವಿರುದ್ದ ಕಾರ್ಯಕರ್ತರು ಕೆಲಸ‌ ಮಾಡುತ್ತಾರೆ ಎಂದರು

ಬೈಂದೂರಲ್ಲಿ ನನ್ನ ಪರ ಪ್ರಚಾರ ಮಾಡಿದ ವ್ಯಕ್ತಿಯನ್ನು ಬಿಜೆಪಿಗೆ ಸೇರಿಸಿಕೊಂಡು ನನ್ನ ವಿರುದ್ದವಾಗಿ ಹೇಳಿಕೆ ಕೊಡಿಸಿದ್ದಾರೆ. ನರೇಂದ್ರ ಮೋದಿ ವಿರುದ್ದವಾಗಿ ಹೇಳಿಕೆ ಕೊಡುತ್ತಿದ್ದಾರೆ. ಇದರಿಂದ ಬಿಜೆಪಿಗೆ ನಷ್ಟವಾಗಿ‌,ಕಾಂಗ್ರೆಸ್ ಗೆ ಅನುಕೂಲವಾಗಲಿದೆ ಎಂದು ಹೇಳಿಸಿದ್ದಾರೆ. ಇದು ಖಂಡನೀಯ ಎಂದರು.

ಯಾವುದೇ ವ್ಯಕ್ತಿ ನನ್ನನ್ನು ನರೇಂದ್ರ ಮೋದಿ ಅವರಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಬಿಜೆಪಿ‌ ಚಿಂತನೆಗಳು ಅವರಿಗೆ ಹಿನ್ನಡೆ ತಂದಿದೆ. ಮೋದಿ ಭಾವಚಿತ್ರ ಪೋಟೋ ಬಳಕೆಗೆ ಕೋರ್ಟ್ ಆದೇಶಿಸಿದೆ. ನರೇಂದ್ರ ಮೋದಿಯವರಿಗೆ ಬಿಜೆಪಿ ನಾಯಕರು ಅವಮಾನ ಮಾಡುವ ಕೆಲಸ ಮಾಡಬಾರದು. ನರೇಂದ್ರ ಮೋದಿಯವರು ಆದರ್ಶ ಪುರುಷ. ಯಾವುದೇ ವ್ಯಕ್ತಿ ನನ್ನನ್ನು ನರೇಂದ್ರ ಮೋದಿ ಅವರಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದರು. ಮೋದಿ ಭಾವಚಿತ್ರಕ್ಕೆ ವಿರೋಧ ವ್ಯಕ್ತ ಪಡಿಸುವ ಮೂಲಕ ಬಿಜೆಪಿಯವರ ಚಿಂತನೆಗೆ ಹಿನ್ನಡೆಯಾಗಿದೆ ಎಂದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*