Cnewstv / 29.04.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಶಿವಮೊಗ್ಗ ಲೋಕ ಸಭಾ ಚುನಾವಣೆ : ಈ 10 ಜನರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲು ಶಿಫಾರಸು ಪತ್ರ..
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹೊರನಡೆದು, ಪ್ರತ್ಯೇಕ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆಎಸ್ ಈಶ್ವರಪ್ಪನವರ ಜೊತೆಯಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ಕಾರ್ಪೊರೇಟರ್, ಕೋರ್ ಕಮಿಟಿ ಸದಸ್ಯರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಶಿವಮೊಗ್ಗ ಬಿಜೆಪಿ ನಗರ ಘಟಕದ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಶಿಫಾರಸ್ಸು ಪತ್ರ ಬರೆಯಲಾಗಿದೆ.
ಪತ್ರದಲ್ಲಿ ಏನಿದೆ…
ಶಿವಮೊಗ್ಗ ನಗರ ಬಿಜೆಪಿ ಕಾರ್ಯಕರ್ತರು ಲೋಕಸಭಾ ಕೇತ್ರದಿಂದ ಬಂಡಾಯ ಅಭ್ಯರ್ಥಿಯ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಅವರ ಜೊತೆ ಗುರುತಿಸಿಕೊಂಡು ಅಲ್ಲೇ ಚುನಾವಣಾ ಕಾರ್ಯ ಮಾಡುತ್ತಾ ಇರುವುದರಿಂದ ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದಾರೆ ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದ್ದರಿಂದ ಈ ಕೆಳಕಂಡ ಕಾರ್ಯಕರ್ತರನ್ನು ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಬೇಕಾಗಿ ತಮ್ಮಲ್ಲಿ ಕೋರಿದೆ.
1. ವಿಶ್ವಾಸ್ ಇ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು 2 ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯರು.
2. ಶಂಕರ್ ಗನ್ನಿ ಮಾಜಿ ಉಪಮೇಯರ್ ಹಾಗೂ 30 ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯರು.
3. ಎಸ್ ಜಿ ರಾಜು, 28 ನೇ ವಾರ್ಡ್ ಮಾಜಿ ಮಹಾನಗರ ಪಾಲಿಕೆ ಸದಸ್ಯರು.
4. ಲಕ್ಷ್ಮಿ ಶಂಕರ್ ನಾಯ್ಕ ಮಾಜಿ ಉಪಮೇಯರ್ ಹಾಗೂ 31 ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯರು.
5. ಸುವರ್ಣ ಶಂಕರ್, ಮಾಜಿ ಮೇಯರ್ ಹಾಗೂ 19 ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯರು.
6. ಆರತಿ ಅ.ಮ ಪ್ರಕಾಶ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ 10 ನೇ ವಾರ್ಡ್ ಮಾಜಿ ಮಹಾನಗರ ಪಾಲಿಕೆ ಸದಸ್ಯರು.
7. ಲತಾ ಗಣೇಶ, ಮಾಜಿ ಮೇಯರ್,ಹಾಗೂ 6 ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯರು.
8. ಕೆ ಇ ಕಾಂತೇಶ ಮಾಜಿ ಶಿವಮೊಗ್ಗ ಕೋರ್ ಕಮಿಟಿ ಸದಸ್ಯರು,
9. ಮೋಹನ್ ರಾವ್ ಜಾಧವ್ ಶಿವಮೊಗ್ಗ ನಗರ ಉಪಾಧ್ಯಕ್ಷರು,
10. ಅನಿತಾ ಮಂಜುನಾಥ ಸಹ್ಯಾದ್ರಿ ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ….
Recent Comments