Breaking News

ಹೊಸ ದಾಖಲೆ ಬರೆದ ಕೆಎಂಎಫ್ ನಂದಿನಿ ಮಿಲ್ಕ್…

Cnewstv / 26.04.2024 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಹೊಸ ದಾಖಲೆ ಬರೆದ ಕೆಎಂಎಫ್ ನಂದಿನಿ ಮಿಲ್ಕ್…

ಬೆಂಗಳೂರು : ಕೆಎಂಎಫ್ ಕರ್ನಾಟಕ ಹಾಲು ಒಕ್ಕೂಟ (KMF) ನಂದಿನಿ ಬ್ರಾಂಡ್ ಉತ್ಪನ್ನಗಳು ತನ್ನದೇ ದಾಖಲೆಯನ್ನು ಮುರಿದು,‌ ದೊಡ್ಡ ಸುದ್ದಿ ಮಾಡಿದೆ.

ಹೌದು ಒಂದೇ ದಿನಕ್ಕೆ 51 ಲಕ್ಷ ಲೀಟರ್ ಹಾಲು ಹಾಗೂ 16.5 ಲಕ್ಷ ಲೀಟರ್ ಮೊಸರನ್ನ ಮಾರಾಟ ಮಾಡುವ ಮೂಲಕ ವಿನೂತನ ದಾಖಲೆಯನ್ನು ಸೃಷ್ಟಿ ಮಾಡಿದೆ. ಒಂದೇ ದಿನದಲ್ಲಿ 44 ಲಕ್ಷ ಲೀಟರ್ ಗಿಂತ ಹೆಚ್ಚು ನಂದಿನಿ ಹಾಲು ಮಾರಾಟವಾಗಿರಲಿಲ್ಲ ಆದರೆ ಈ ವರ್ಷ ಒಂದೇ ದಿನದಲ್ಲಿ 48 ಲಕ್ಷ ಲೀಟರ್ ಮಾರಾಟವಾಗಿದೆ.

ಸಾಮಾನ್ಯವಾಗಿ ಸಂಸ್ಥೆಯು ದಿನಕ್ಕೆ ಎರಡು ಬಾರಿ ಉತ್ಪನ್ನಗಳನ್ನು ಪೂರೈಸುತ್ತದೆ ಆದರೆ ಈ ಬಾರಿ ಕೆಲವು ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚಿದ್ದರಿಂದ ಮೂರು ಬಾರಿ ಉತ್ಪನ್ನಗಳನ್ನು ಪೂರೈಸಿದೆ.

ನಂದಿನಿಯಾ ಐಸ್ ಕ್ರೀಮ್ ಗಳು ಕೂಡ ಕಳೆದ ವರ್ಷಕ್ಕಿಂತ ಶೇಕಡ 40ರಷ್ಟು ಹೆಚ್ಚು ಮಾರಾಟವಾಗಿದೆ. ಈ ಬಾರಿಯ ವರೆಗೆ ಅತ್ಯಾಧಿಕ ಐಸ್ ಕ್ರೀಮ್ ಮಾರಾಟವಾಗಿರುವುದು ಕೂಡ ವರದಿಯಾಗಿದೆ

#nandini #milkproduct

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*