Breaking News

ನೇಹಾ ಹತ್ಯೆ ಪ್ರಕರಣ, ಅಂಜುಮನ್ ಸಂಸ್ಥೆಯಿಂದ ಹುಬ್ಬಳ್ಳಿ-ಧಾರವಾಡ ಬಂದ್.

Cnewstv / 22.04.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ನೇಹಾ ಹತ್ಯೆ ಪ್ರಕರಣ, ಅಂಜುಮನ್ ಸಂಸ್ಥೆಯಿಂದ ಹುಬ್ಬಳ್ಳಿ-ಧಾರವಾಡ ಬಂದ್.

ಹುಬ್ಬಳ್ಳಿ : ನೇಹಾ ಹತ್ಯೆ ಪ್ರಕರಣ ಖಂಡಿಸಿ ಅಂಜುಮನ್ ಸಂಸ್ಥೆ ವತಿಯಿಂದ ಹುಬ್ಬಳ್ಳಿ ಧಾರವಾಡ ನಗರದಲ್ಲಿ ಬಂದ್ ಗೆ ಕರೆ ನೀಡಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಾರುಕಟ್ಟೆ ಪ್ರದೇಶ ಬಿಕೋ ಎನ್ನುತ್ತಿದೆ.

ರಾಜ್ಯದ್ಯಂತ ಸುದ್ದಿಯಾಗಿರುವ ಕಾಲೇಜು ಯುವತಿ ನೇಹಾ ಹಿರೇಮಠ ಹಚ್ಚೆಗೈದ ಆರೋಪಿ ಫಯಜ್ ನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪ್ರತಿಷ್ಠಿತ ಸಂಸ್ದೆ ಎನಿಸಿಕೊಂಡಿರುವ ಅಂಜುಮನ್ ಸಂಸ್ಥೆ ವತಿಯಿಂದ ನೇಹಾ ಹತ್ಯೆ ಪ್ರಕರಣ ಖಂಡಿಸಿ ಇಂದು ಎರಡು ನಗರಗಳಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಕರೆ ನೀಡಲಾಗಿತ್ತು.

ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಾಹಬಜಾರ್ ಮತ್ತು ನೂರಾನಿ ಮಾರ್ಕೆಟ್ ಸಂಪೂರ್ಣ ಬಂದ್ ಅಗಿದೆ. ಸುಮಾರು ಸಾವಿರಕ್ಕೂ ಹೆಚ್ಚು ಮುಸ್ಲಿಂ ವ್ಯಾಪಾರಸ್ಥರು ಅಂಗಡಿಯಾಗಳನ್ನ ಮುಚ್ಚಿ ಸ್ನೇಹ ಕುಟುಂಬದ ಜೊತೆ ಐಕ್ಯತೆಯನ್ನ ಪ್ರದರ್ಶಿಸಿದ್ದಾರೆ. ಮುಚ್ಚಿದ ಅಂಗಡಿಗಳ ಮುಂದೆ ಜಸ್ಟಿಸ್ ಟು ನೇಹಾ ಎಂದು ಬರೆದು ಪ್ಲೆಕಾಡ್ ಗಳನ್ನು ತೂಗು ಹಾಕಲಾಗಿದೆ. ಇನ್ನು ಫಯಾಜ್ ಪರ ಯಾರು ವಕಾಲತ್ತು ವಹಿಸಬಾರದು ಎಂದು ಹುಬ್ಬಳ್ಳಿ ಧಾರವಾಡ ವಕೀಲರ ಸಂಘ ಕೂಡ ನಿರ್ಧರಿಸಿದೆ.

#Nehahiremath #fayaz #hublidharwad #anjuman society

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*