Breaking News

ಯಡಿಯೂರಪ್ಪ ಫ್ಯಾಮಿಲಿ ಬಂಗಾರಪ್ಪ ಋಣದಲ್ಲಿದೆ.

Cnewstv / 17.04.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಯಡಿಯೂರಪ್ಪ ಫ್ಯಾಮಿಲಿ ಬಂಗಾರಪ್ಪ ಋಣದಲ್ಲಿದೆ.

ಶಿವಮೊಗ್ಗ : ಯಡಿಯೂರಪ್ಪ ಫ್ಯಾಮಿಲಿ ಬಂಗಾರಪ್ಪ ಋಣದಲ್ಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಬಂಗಾರಪ್ಪ ಸಂಸದರಾಗಿ ಗೆದ್ದಿದ್ದು ಅಂತ ಹೇಳ್ತಾರೆ. ರಾಘವೇಂದ್ರರಿಗೆ ಮಾನ, ಮರ್ಯಾದೆ ಇದೆಯಾ? ಬಿಜೆಪಿಗೆ ಶಕ್ತಿ ಕೊಟ್ಟಿದ್ದು ಬಂಗಾರಪ್ಪ. ಸೋಲನ್ನು ಕೀಳು ಮಟ್ಟದಲ್ಲಿ ಮಾತಾಡಬೇಡಿ. ಈಗ ಆ ರುಚಿ ನೀವು ಕಾಣಲಿದ್ದೀರಿ. ಯಡಿಯೂರಪ್ಪ ಸೋತಾಗ ಅವರನ್ನು ಗೆಲ್ಲಿಸಿದ್ದೇ ಬಂಗಾರಪ್ಪ. ಯಡಿಯೂರಪ್ಪರೇ ಬಂಗಾರಪ್ಪರಿಂದ ಶಕ್ತಿ ತುಂಬಿಸಿಕೊಂಡಿದ್ದು. ನಂತರ ಬಿಜೆಪಿ ಬಿಟ್ಟು ಸಮಾಜವಾದಿ ಪಕ್ಷದಿಂದ ನಿಂತು ಗೆದ್ದರಲ್ಲ…ಮೂರನೇ ಸ್ಥಾನಕ್ಕೆ ಆಗ ಬಿಜೆಪಿ ತಳ್ಳಲ್ಪಟ್ಟಿತ್ತಲ್ಲ…ಆಗ ನಿಮಗೆ ಶಕ್ತಿ ಇರಲಿಲ್ವಾ?

ಜಿಲ್ಲಾಸ್ಪತ್ರೆಯನ್ನು ರಾಜಕಾರಣದ ಸ್ವಾರ್ಥಕ್ಕೆ ಶಿಕಾರಿಪುರಕ್ಕೆ ಒಯ್ದಿದ್ರು. ಜಿಲ್ಲಾಸ್ಪತ್ರೆ ಜಿಲ್ಲಾ ಕೇಂದ್ರದಲ್ಲೇ ಇರಬೇಕು. ಸಿಮ್ಸ್ ಕೂಡ ಕಾಂಗ್ರೆಸ್ ಕೂಸು. ಭ್ರಷ್ಟರನ್ನು ಸದೆಬಡಿಯೋ ಕೆಲಸ ನಡೆಯುತ್ತೆ. ಎಂ ಸ್ಯಾಂಡ್, ಜಲ್ಲಿ ಕಥೆ ಗೊತ್ತಿದೆ. ಬರದ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ.ನಾಚಿಕೆ ಆಗಬೇಕು ಸಂಸದ ರಾಘವೇಂದ್ರರಿಗೆ. ಶರಾವತಿ ಸಮಸ್ಯೆ ಬಗ್ಗೆ ಸುಳ್ಳು ಹೇಳ್ತಾನೇ ಇದಾರೆ. ಈಶ್ವರಪ್ಪ, ಯತ್ನಾಳ್, ಮಾಲೀಕಯ್ಯ ಗುತ್ತೇದಾರ್, ಕರಡಿಯವರಿಗೆ ಉತ್ರ ಕೊಡಿ. ಸ್ವಾರ್ಥದ ರಾಜಕಾರಣ ಬಿಡಿ ಎಂದರು.‌

ತಂದೆಯನ್ನು ಸೋಲಿಸಿದ್ದಿರಿ. ಈಗ ಮಗಳು ಸೋಲಿಸುತ್ತಾರೆ. ನೀರಾವರಿಗೋಸ್ಕರ ಮಧು ಬಂಗಾರಪ್ಪ ಹೆಸರನ್ನು ಜನ ಹೇಳ್ತಿದಾರೆ. ಪಾದಯಾತ್ರೆ ಮಾಡಿದ್ದು ಜನರಿಗೆ ನೆನಪಿದೆ.
ಬರಗಾಲಕ್ಕೆ ದುಡ್ಡು ತರೋ ಯೋಗ್ಯತೆ ಇಲ್ಲ. ಮೋದಿನ ವಿಶ್ವಗುರು ಮಾಡಬೇಕಂತೆ. ಮತಹಾಕಿದವರನ್ನು ಮನುಷ್ಯರಾಗಿ ಕಾಣಿ. ಕಾರ್ಖಾನೆಗಳೆಲ್ಲ ಸೇಲ್ ಆಗಿರೋ ಲೆಕ್ಕ ಗೊತ್ತಿದೆ.
ಸ್ವಾರ್ಥದ ರಾಜಕಾರಣ ಮಾಡ್ತಿದ್ದಾರೆ ರಾಘವೇಂದ್ರ. ಕಾರ್ಖಾನೆಗಳ ಅಭಿವೃದ್ಧಿಗೆ ನಮ್ಮದೇ ಯೋಜನೆಗಳಿವೆ. ಭ್ರಷ್ಟಾಚಾರ ತೊಳೆಯೋ ಪೌಡರ್ ಬಿಜೆಪಿಯಿಂದ ಬಂದಿದೆ. ವರ್ಸ್ಟ್ ವಾಷಿಂಗ್ ಪೌಡರ್ ಇದು. ಭ್ರಷ್ಟಾಚಾರ ತೊಳೆಯೋ ಮಾತಾಡಿ ಭ್ರಷ್ಟಾಚಾರಿಗಳಾಗಿದ್ದಾರೆ ಎಂದರು..‌

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ…

Leave a Reply

Your email address will not be published. Required fields are marked *

*