Cnewstv / 16.04.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಯುವತಿಯನ್ನು ಜಾವಳ್ಳಿಯ ಕಾಡಿನೊಳಗೆ ಎಳೆದು ಹೋದ ದುಷ್ಕರ್ಮಿಗಳು…
ಶಿವಮೊಗ್ಗ : ಯುವತಿಯೊಬ್ಬಳನ್ನ ದುಷ್ಕರ್ಮಿಗಳು ಕಾಡಿನೊಳಗೆ ಎಳೆದೊಯ್ದು ಬಂಗಾರದ ಸರವನ್ನ ಕಸಿದುಕೊಂಡ ಘಟನೆ ಶಿವಮೊಗ್ಗ ತಾಲೂಕಿನ ಜಾವಳ್ಳಿಯಲ್ಲಿ ನಡೆದಿದೆ.
ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಬೈಕಿನಲ್ಲಿ ಸ್ನೇಹಿತನೊಂದಿಗೆ ಯುವತಿ ತೆರಳುತ್ತಿದ್ದರು ಈ ವೇಳೆ ಮೂತ್ರ ವಿಸರ್ಜನೆಗೆಂದು ನೀಲಗಿರಿ ಪ್ಲಾಂಟೇಶನ್ ಬಳಿ ನಿಲ್ಲಿಸಲಾಗಿದೆ. ಈ ವೇಳೆ ಅಲ್ಲಿಂದ ಆರು ಜನ ಯುವಕರು ಯುವತಿಯನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿದ್ದಾರೆ. ತಕ್ಷಣವೇ ಯುವತಿ ಜೋರಾಗಿ ಕೂಗಿಕೊಂಡಿದ್ದಾಳೆ. ರಸ್ತೆ ಬದಿ ನಿಂತಿದ್ದ ಸ್ನೇಹಿತ ಇದನ್ನು ಕೇಳಿಸಿಕೊಂಡು ರಕ್ಷಣೆಗೆ ಧಾವಿಸಿದ್ದು, ದುಷ್ಕರ್ಮಿಗಳು ಆತನ ಮೇಲು ಕೂಡ ಹಲ್ಲೆ ನಡೆಸಿ ಅವನ ಬಳಿ ಇದ್ದಂತಹ ಮೊಬೈಲ್ ಹಾಗೂ ನಗದು ಹಣವನ್ನು ಕಸಿದುಕೊಂಡಿದ್ದಾರೆ. ಇದನ್ನ ಪಕ್ಕದ ತೋಟದಲ್ಲಿದ್ದ ವ್ಯಕ್ತಿ ಗಮನಿಸಿದ್ದ ಕೂಡಲೇ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ…
C News TV Kannada News Online in cnewstv