Cnewstv / 05.04.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ವೃತ್ತಿ ಜೀವನ ಸಾರ್ಥಕತೆ-೫೦ ವಿಶೇಷ ಅಭಿನಂದನ ಕಾರ್ಯಕ್ರಮ..
ಶಿವಮೊಗ್ಗ : ಜಿಲ್ಲಾ ವಕೀಲರ ಸಂಘ ಹಾಗೂ ಜಿ.ಎಸ್. ನಾಗರಾಜ್ ರವರ ಕಿರಿಯ ವಕೀಲರ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಏ.೬ರ ಸಂಜೆ ೬ಕ್ಕೆ ರಾಷ್ಟಿçÃಯ ಶಿಕ್ಷಣ ಸಮಿತಿಯ ರಾಷ್ಟಿçÃಯ ಪ್ರೌಢಶಾಲೆಯ ಆವರಣದಲ್ಲಿ ಜಿ.ಎಸ್. ನಾಗರಾಜ್ ಅವರ ವಕೀಲ ವೃತ್ತಿ ಬದುಕಿನ ೫೦ ವರ್ಷ ಪೂರೈಸಿದ ಸಂಭ್ರಮದಲ್ಲಿ “ವೃತ್ತಿ ಜೀವನ ಸಾರ್ಥಕತೆ-೫೦” ವಿಶೇಷ ಅಭಿನಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ವಕೀಲರ ಸಂಘ ಹಾಗೂ ಜಿ.ಎಸ್.ನಾಗರಾಜ ಅವರ ಕಿರಿಯ ವಕೀಲರ ಬಳಗದಿಂದ ಏ.೦೬ ರ ಶನಿವಾರ ಸಂಜೆ ೦೬:೦೦ ಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ರಾಷ್ಟ್ರೀಯ ಪ್ರೌಢಶಾಲೆಯ ಆವರಣದಲ್ಲಿ ಜಿ.ಎಸ್.ನಾಗರಾಜ ಅವರ ವಕೀಲಿ ವೃತ್ತಿ ಬದುಕಿನ ೫೦ ವರ್ಷ ಪೂರೈಸಿದ ಸಂಭ್ರಮದಲ್ಲಿ ‘ವೃತ್ತಿ ಜೀವನ ಸಾರ್ಥಕತೆ : ೫೦’ ವಿಶೇಷ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿ.ಎಸ್.ಎನ್ ಕಿರಿಯ ವಕೀಲರ ಬಳಗದ ಸದಸ್ಯ ನಾಗೇಶ ಸುದ್ದಿಗೋಷ್ಟಿಯಲ್ಲಿ ಹೇಳಿದರು.
.
೧೯೬೮ರಲ್ಲಿ ವಕೀಲರಾಗಿ ನೊಂದಾಯಿಸಿಕೊಂಡ ಜಿ.ಎಸ್.ನಾಗರಾಜ ಅವರು, ಪ್ರಖ್ಯಾತ ವಕೀಲರಾಗಿದ್ದ ಮಹಿಷಿ ನರಸಿಂಹಮೂರ್ತಿ ಅವರ ಕಛೇರಿಯಲ್ಲಿ ಕಿರಿಯ ನ್ಯಾಯವಾದಿಗಳಾಗಿ ವೃತ್ತಿ ಪ್ರಾರಂಭಿಸಿದರು. ಸಿವಿಲ್ ಕ್ರಿಮಿನಲ್ ಕಾರ್ಮಿಕ ವಿಭಾಗದಲ್ಲಿ ವಿಶೇಷ ಪರಿಣಿತಿ ಪಡೆದು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರಿನಲ್ಲಿ ಪ್ರಮುಖ ಕೇಸ್‌ಗಳನ್ನು ನಿರ್ವಹಿಸುವ ಮೂಲಕ ನೊಂದ ಜೀವಗಳಿಗೆ ನ್ಯಾಯ ಒದಗಿಸಿದ್ದಾರೆ ಎಂದರು.
ಭದ್ರಾವತಿಯ ನಾಗಸಮುದ್ರದ ಗೋಲಿಬಾರ್‌ನಲ್ಲಿ ರೈತರ ಹತ್ಯೆ ಕೇಸ್ ಕುರಿತ ಸರ್ಕಾರದ ತನಿಖಾ ಆಯೋಗದ ಮುಂದೆ ರೈತ ಸಂಘದ ಪರವಾಗಿ, ಹೊನ್ನಾಳಿಯ ಚುನಾವಣೆ ಸಂದರ್ಭದಲ್ಲಿ ಗೊಲಿಬಾರ್ ನಡೆದಾಗ ಸರ್ಕಾರದ ತನಿಖಾ ಆಯೋಗದ ಮುಂದೆ ಪೊಲೀಸರ ಪರವಾಗಿ ಹಾಗೂ ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ತಡೆಯಲು ಹೋದ ಪೊಲೀಸರ ಮೇಲೆ ನಡೆದ ಹಲ್ಲೆ ಪ್ರಕರಣದ ಕುರಿತ ಸರ್ಕಾರದ ತನಿಖಾ ಆಯೋಗದ ಮುಂದೆ ಪೊಲೀಸರ ಪರವಾಗಿ ವಾದ ಮಂಡಿಸಿದ್ದಾರೆ ಎಂದರು.
ಶಿವಮೊಗ್ಗದ ಪ್ರತಿಷ್ಟಿತ ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿಯು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಭಾರತ-ಚೀನಾ ಮೈತ್ರಿ ಸಂಘದ ರಾಜ್ಯಾಧ್ಯಕ್ಷರಾಗಿ, ನಂತರ ಭಾರತೀಯ ಅಧ್ಯಕ್ಷರಾಗಿ ಅಂತರಾಷ್ಟ್ರೀಯ ಮಟ್ಟಕ್ಕೆ ತಮ್ಮ ಸೇವೆಯನ್ನು ವಿಸ್ತರಿಸಿ ಕೊಂಡಿದ್ದಾರೆ. ಮಲೇಶಿಯಾ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಕಾನೂನು ಪ್ರಾಧ್ಯಾಪಕರು ಮತ್ತು ನ್ಯಾಯವಾದಿಗಳ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. ಇಂತಹ ವ್ಯಕ್ತಿಯನ್ನು ಸನ್ಮಾನ ಮಾಡುತ್ತಿರುವು ನಮ್ಮ ಹೆಮ್ಮೆಯಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ, ಕಿರಿಯ ವಕೀಲರ ಬಳಗದ ಸದಸ್ಯರಾದ ದೇವೇಂದ್ರಪ್ಪ, ಅನಂತದತ್ತಾ, ಅಣ್ಣಪ್ಪ, ಸೋಮಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399