Breaking News

ಏ.15 ಕ್ಕೆ ಗೀತಾ ಶಿವರಾಜ್ ಕುಮಾರ್ ನಾಮಪತ್ರ ಸಲ್ಲಿಕೆ.

Cnewstv / 04.04.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಏ.15 ಕ್ಕೆ ಗೀತಾ ಶಿವರಾಜ್ ಕುಮಾರ್ ನಾಮಪತ್ರ ಸಲ್ಲಿಕೆ.

ಶಿವಮೊಗ್ಗ : ಏ.15 ಕ್ಕೆ ಗೀತ ಶಿವರಾಜ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ತಿಳಿಸಿದ್ದಾರೆ.

ಏ.15 ಕ್ಕೆ ಗೀತಾ ಶಿವರಾಜ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಶಿವರಾಜ್ ಕುಮಾರ್ ಸೇರಿದಂತೆ ಎಲ್ಲ ಗಣ್ಯರು ಇರ್ತಾರೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಅತ್ಯಂತ ಹೆಚ್ಚಿನ ಲೀಡ್ ಗೀತಕ್ಕನಿಗೆ ಸಿಗಲಿದೆ. ಶೇ.65 ರಷ್ಟು ಹೆಣ್ಣು ಮಕ್ಕಳು ನಂಬಿಕೆಯಿಂದ ಗೀತಾರನ್ನು ಒಪ್ಪಿಕೊಂಡು ಗೆಲ್ಲಿಸಲು ಶ್ರಮಿಸುವ ನಂಬಿಕೆ ಇದೆ. ತಾಲ್ಲೂಕು ಮಟ್ಟದ ಸಭೆಗಳೆಲ್ಲ ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲೂ ಯೋಜನೆ ರೂಪಿಸ್ತಿದೀವಿ. ಗೀತಕ್ಕ ಗ್ರಾ.ಪಂ.ಮಟ್ಟದಲ್ಲೂ ಪ್ರಚಾರ ಮಾಡ್ತಿದಾರೆ.

ಕಾಂಗ್ರೆಸ್ ನಿಂದ ಬೈಂದೂರು ಸೇರಿದಂತೆ ಎಲ್ಲ ಕಡೆ ಹಠ ತೊಟ್ಟು ಚುನಾವಣೆ ಮಾಡಲಾಗುತ್ತಿದೆ. ಸುಕುಮಾರ್ ಶೆಟ್ಟಿ, ಗೋಪಾಲ್ ಪೂಜಾರಿ ಓಡಾಟ, ಕೆಲಸ ಅದ್ಭುತವಾಗಿ ಮಾಡ್ತಿದಾರೆ. ಮಾಧ್ಯಮದ ಜೊತೆಗೆ ನಾವು ಹೇಳಿದ್ದನ್ನು ಮತದಾರರ ಬಳಿಯೂ ಒಯ್ಯಬೇಕು. ಮತದಾರರ ಬಳಿ ಹೆಚ್ಚು ಹೆಚ್ಚಾಗಿ ಶಿವರಾಜ್ ಕುಮಾರ್ ಓಡಾಡ್ತಿದಾರೆ. ಡಮ್ಮಿ ಕಮ್ಮಿ ಅನ್ನುವವರಿಗೆಲ್ಲ ಉತ್ತರ ಸಿಗುತ್ತೆ. ದೇಶದಲ್ಲೇ ಬದಲಾವಣೆ ಗಾಳಿ ಬೀಸ್ತಿದೆ. ಸೋಷಿಯಲ್ ಮೀಡಿಯಾಗಳ ರೆಸ್ಪಾನ್ಸ್ ನೋಡಿದ್ರೆ ಬಿಜೆಪಿ ಸೋಲುತ್ತೆ.

#Geethshivarajkumar #Madhubangarappa #Congress #BJP #Shivamogga #MP #MPElection

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ..

Leave a Reply

Your email address will not be published. Required fields are marked *

*