Cnewstv / 02.04.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಧನಂಜಯ ಸರ್ಜಿ ಇನ್ನು ಎಳಸು ಆತ ರಾಜಕೀಯ ಎಲ್‌ಕೆಜಿ ಶಾಲೆಗೂ ಇನ್ನೂ ಬಂದಿಲ್ಲ.
ಶಿವಮೊಗ್ಗ : ಧನಂಜಯ ಸರ್ಜಿ ಇನ್ನು ಎಳಸು ಆತ ರಾಜಕೀಯ ಎಲ್‌ಕೆಜಿ ಶಾಲೆಗೂ ಇನ್ನೂ ಬಂದಿಲ್ಲ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ನಿಮ್ಮ ವಿರುದ್ಧ ಧನಂಜಯ ಸರ್ಜಿ ಹಾಗೂ ರುದ್ರೇಗೌಡರು ಟೀಕೆ ಮಾಡಿದ್ದಾರೆ. ಕುಹಕ ಮಾತುಗಳನ್ನು ಆಯನೂರು ಮಂಜುನಾಥ್ ಆಡಿದ್ದಾರೆ ಎಂದಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರುದ್ರೇಗೌಡರ ಬಗ್ಗೆ ನನಗೆ ಅಭಿಮಾನವಿದೆ. ಧನಂಜಯ ಸರ್ಜಿ ಇನ್ನು ಎಳಸು ಆತ ರಾಜಕೀಯ ಎಲ್‌ಕೆಜಿ ಶಾಲೆಗೂ ಇನ್ನೂ ಬಂದಿಲ್ಲ. ಆತನಿಗೆ ರಾಜಕಾರಣ ಏನೆಂದರೆ ಎಂದು ಗೊತ್ತೇ ಇಲ್ಲ ಎಂದರು.
ರುದ್ರೇಗೌಡರ ಆಗಲೀ, ಧನಂಜಯ ಸರ್ಜಿ ಆಗಲಿ ನಾನು ಏನು ಕುಹಕ ಮಾತನಾಡಿದ್ದೇನೆ ಎಂದು ಮೊದಲು ಅರ್ಥ ಮಾಡಿಕೊಳ್ಳಲಿ, ನಾನು ಬಿ.ಎಸ್. ಯಡಿಯೂರಪ್ಪನವರ ಪರವಾಗಿ ಮಾತನಾಡಿದ್ದೇನೆ. ಅದು ಕುಹಕ ಹೇಗೆ ಆಗುತ್ತದೆ. ಬಿಜೆಪಿಯಲ್ಲಿ ಇದ್ದು, ಕೆಜೆಪಿ ಪರ ರಾಘವೇಂದ್ರ ಮಾತನಾಡಿದ್ದಾರೆ ಎಂಬುವುದು ಕುಹಕವೇ ? ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಪ್ಪನನ್ನೇ ಜೈಲಿಗಟ್ಟಿದ್ದು ಕುಹಕವೇ ಹೇಳಬೇಕಲ್ಲ ? ಅಪ್ಪನ ಮೇಲೆ ಆಪಾಧನೆಯ ರೂಪದ ಹೇಳಿಕೆಗಳನ್ನು ಅವರದೇ ಪಕ್ಷದವರು ಮಾತನಾಡಿದಾಗ, ಸುಮ್ಮನಿದ್ದರು ಎಂದು ಹೇಳಿದ್ದು, ಕುಹಕವೇ ಎಂದು ಪ್ರಶ್ನೆ ಮಾಡಿದರು.
ಧನಂಜಯ ಸರ್ಜಿ ವಿರುದ್ಧ ಕಿಡಿಕಾರಿದ ಆಯನೂರು ಮಂಜುನಾಥ್ ಈ ಸರ್ಜಿಯವರಿಗೆ ರಾಜಕಾರಣವೇ ಗೊತ್ತಿಲ್ಲ, ಬಿಜೆಪಿಗೆ ಬರುವ ಮೊದಲು ಎಲ್ಲೆಲ್ಲಿ ಬಾಗಿಲು ತಟ್ಟಿದ್ದರು ಎಂಬುವುದನ್ನು ಅವರೇ ಪ್ರಶ್ನೆ ಮಾಡಿಕೊಳ್ಳಲಿ, ಆಯನೂರು ಮಂಜುನಾಥ್ ಬಗ್ಗೆ ಟೀಕೆ ಮಾಡಲು ಅವರು ಇನ್ನೂ ತುಂಬ ರಾಗಿ ಬೀಸಬೇಕು ಎಂದರು.
ಬಿಜೆಪಿಯಿಂದ ನಾನು ಫಲಾನುಭವಿ ಆಗಲು ನನ್ನದೇ ಶ್ರಮವಿದೆ. ಎಲ್ಲಾ ಚುನಾವಣೆಗಳನ್ನು ನಾನು ಎದುರಿಸಿದ್ದೇನೆ. ಅನೇಕ ಚುನಾವಣೆಗಳಲ್ಲಿ ನನ್ನ ಪರ ಪ್ರಚಾರ ಮಾಡಲು ಯಾರು ಬಂದಿರಲಿಲ್ಲ. ಆಯಾ ಪಕ್ಷದಲ್ಲಿ ಇದ್ದಾಗ ಸಮರ್ಥವಾಗಿ ಕೆಲಸ ಮಾಡಿದ್ದೇನೆ. ಮನಸ್ಸೊಂದನ್ನು ಇಟ್ಟುಕೊಂಡು ಇನ್ನೊಂದು ಪಕ್ಷದ ಜೊತೆ ನಾನು ಕೆಲಸ ಮಾಡಿಲ್ಲ. ನಾನು ರಾಜಕೀಯ ವ್ಯಭಿಚಾರಿಯೂ ಅಲ್ಲ, ಹಾಗೇ ವ್ಯಭಿಚಾರ ಮಾಡಿದ್ದರೆ ಅದು ರಾಘವೇಂದ್ರ ಎಂದು ಕುಟುಕಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಪ್ರಮುಖರಾದ ಶಿ.ಜು. ಪಾಶ, ಜಿ.ಪದ್ಮಾನಾಭ್, ಎಸ್.ಪಿ.ಪಾಟೀಲ್, ಕೃಷ್ಣ, ದಿವಾಕರ, ಆಯನೂರು ಸಂತೋಷ್, ರುದ್ರೇಶ್, ಜಗದೀಶ್ ಗೌಡ, ಆಯನೂರು ಸಂತೋಷ, ಹಿರಣ್ಣಯ್ಯ ಮುಂತಾದವರು ಇದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ…
Recent Comments