Breaking News

ಕಳೆದು ಹೋದ 500 ಕ್ಕೂ ಹೆಚ್ಚು ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿ, ಮಾಲೀಕರಿಗೆ ಹಿಂದುರಿಗಿಸಿದ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು..

Cnewstv / 01.04.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಕಳೆದು ಹೋದ 500 ಕ್ಕೂ ಹೆಚ್ಚು ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿ, ಮಾಲೀಕರಿಗೆ ಹಿಂದುರಿಗಿಸಿದ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು..

ಶಿವಮೊಗ್ಗ : ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು ಕಳುವಾಗಿದ್ದ 12.10 ಲಕ್ಷ ರೂ. ಮೌಲ್ಯದ ಒಟ್ಟು 100 ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದು, ಇಂದು ಮಾಲೀಕರಿಗೆ ಅವರವರ ಮೊಬೈಲ್‌ಗಳನ್ನು ಹಿಂದಿರುಗಿಸಲಾಯಿತು.

ಈ ಬಗ್ಗೆ ಸುದ್ದಿಗೋಷ್ಠಿ ಮಾಡಿದ ಎಸ್.ಪಿ. ಮಿಥುನ್ ಕುಮಾರ್, ಸೈಬರ್ ಕ್ರೈಂ ಸಿಬ್ಬಂದಿಗಳನ್ನೊಳಗೊಂಡ CEIR (Central Equipment Identity Register) ಸಿಇಐಆರ್ ಪೋರ್ಟಲ್ ನಲ್ಲಿ ಪತ್ತೆಯಾದ ಮೊಬೈಲ್‌ಗಳು ಇವಾಗಿವೆ ಎಂದರು. ಈವರೆಗೆ ಈ ಪೋರ್ಟಲ್ ಮೂಲಕ 500 ಕ್ಕೂ ಹೆಚ್ಚಿನ ಮೊಬೈಲ್ ಗಳನ್ನು ಪತ್ತೆ ಹಚ್ಚಲಾಗಿದೆ. ಪತ್ತೆಹಚ್ಚಿದ ಪೊಲೀಸರಿಗೆ ಎಸ್ ಪಿ ಮಿಥುನ್ ಕುಮಾರ್ ಅಭಿನಂದಿಸಿದರು.

ಮೊಬೈಲ್ ಕಳೆದುಕೊಂಡ ಸಾರ್ವಜನಿಕರು ಪೊಲೀಸ್ ಠಾಣೆಗೆ ಭೇಟಿ ನೀಡದೇ ತಾವೇ ಸ್ವತಃ ASP ಅಪ್ಲಿಕೇಷನ್‌ನ ಮೂಲಕ ದೂರು ದಾಖಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು. ಅಲ್ಲಿ ಅರ್ಜಿ ತುಂಬಿ ಅಗತ್ಯ ವಿವರಗಳನ್ನು ದಾಖಲಿಸಿದರೆ ದೂರು ದಾಖಲಾದ 24 ಗಂಟೆಯೊಳಗೆ ಕಳೆದುಹೋದ ಮೊಬೈಲ್ ಬ್ಲಾಕ್ ಆಗುತ್ತದೆ. ಆಗ ಮೊಬೈಲ್ ದುರ್ಬ ಳಕೆಯಾಗುವುದಿಲ್ಲ. ಆಗ ಮೊಬೈಲ್ ಬಳಸಲು ಪ್ರಯತ್ನಿಸಿದಲ್ಲಿ ಅದರ ವಿವರ ಪೊಲೀಸರಿಗೆ ಸಿಗುತ್ತದೆ. ಸುಲಭವಾಗಿ ಇದರಿಂದ ಮೊಬೈಲ್ ಕಳ್ಳತನ ಪತ್ತೆಹಚ್ಚಬಹುದು ಎಂದರು.

ಎಸ್ ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ನಿರೀಕ್ಷಕ ಜೆ.ಎಸ್.ತಿಪ್ಪೇಸ್ವಾಮಿ ನೇತೃತ್ವದಲ್ಲಿ ಸೈಬರ್ ಕ್ರೈಂ ಪೊಲೀಸರು ಕಾರ್ಯನಿರ್ವಹಿಸಿದ್ದರು.

#Cybercrime #Phone #Karnatakastatepolice #Shivamogga #mobileretun #Mobile #SP

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ..

Leave a Reply

Your email address will not be published. Required fields are marked *

*