Cnewstv / 01.04.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿಯನ್ನು ಒಟ್ಟಾಗಿ ಗೆಲ್ಲಿಸುತ್ತೇವೆ.
ಶಿವಮೊಗ್ಗ : ರಾಷ್ಟೀಯ ನಾಯಕರ ಒಪ್ಪದದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿಯನ್ನು ಒಟ್ಟಾಗಿ ಗೆಲ್ಲಿಸುತ್ತೇವೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿ ರಘುಪತಿ ಭಟ್ ಹಾಗೂ ಜೆಡಿಎಸ್ ಶಾಸಕಿ ಶಾರದಾ ಪರ‍್ಯಾನಾಯ್ಕ್ ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜೆಡಿಎಸ್ ಪಕ್ಷವೀಗ ಎನ್‌ಡಿಎ ಪಕ್ಷದ ಮೈತ್ರಿ ಪಕ್ಷವಾಗಿದೆ. ರಾಷ್ಟç ಮತ್ತು ರಾಜ್ಯಮಟ್ಟದಲ್ಲಿ ಹೊಂದಾಣಿಕೆಯಾಗಿದ್ದರು ಕೂಡ ಬೂತ್ ಮಟ್ಟದಲ್ಲಿ ಈ ಹೊಂದಾಣಿಕೆಗೆ ಸ್ಪಷ್ಟರೂಪ ಬಂದಿರಲಿಲ್ಲ. ಶಿವಮೊಗ್ಗ ಗ್ರಾಮಾಂತರ ಪ್ರದೇಶದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಇದ್ದದು ನಿಜ ಆದರೆ ಅದೆಲ್ಲ ಈಗ ಕರಗಿ ನಾವು ಒಟ್ಟಾಗಿದ್ದೇವೆ. ಗ್ರಾಮಾಂತರ ವಿಧಾನಸಭ ಕ್ಷೇತ್ರದಿಂದ ಅತಿ ಹೆಚ್ಚು ಮತದ ಮೂಲಕ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಲಾಗುವುದು ಎಂದು ರಘುಪತಿ ಭಟ್ ಹಾಗೂ ಶಾರದಾ ಪರ‍್ಯನಾಯ್ಕ್ ಒಟ್ಟಾಗಿ ಹೇಳಿದರು.
ರಾಷ್ಟ್ರೀಯ ನಾಯಕರು, ಮಾಜಿ ಪ್ರಧಾನಿ ದೇವೇಗೌಡರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಇಚ್ಛೆಯಂತೆ ಈ ಸಮನ್ವಯ ಚುನಾವಣೆ. ಹೊಂದಾಣಿಕೆಯ ಸಂಬAಧ ಹೆಚ್ಚಿದೆ. ಎಲ್ಲ ಸಭೆ, ಸಮಾರಂಭಗಳಲ್ಲಿ ಸಮನ್ವಯತೆ ಸಾಧಿಸುತ್ತಿದ್ದೇವೆ. ನೇರ ಸ್ಪರ್ಧೆಗೆ ಹಲವು ಸೂತ್ರಗಳನ್ನು ಮಾಡಿದ್ದೇವೆ. ಅಭ್ಯರ್ಥಿ ರಾಘವೇಂದ್ರರ ಎಲ್ಲ ಪ್ರಚಾರದ ವಸ್ತುಗಳಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಎಂದಿರುತ್ತೆ. ಕಮಲದ ಗುರುತಲ್ಲಿ ಸ್ಪರ್ಧೆ. ಮನೆ ಮನೆ ಪ್ರಚಾರ ಎರಡೂ ಪಕ್ಷಗಳ ಕಾರ್ಯಕರ್ತರು ಮಾಡಲಿದ್ದಾರೆ ಎಂದು ರಘುಪತಿ ಭಟ್ ತಿಳಿಸಿದರು. ಜೆಡಿಎಸ್‌ನ ಒಂದೂ ಮತಗಳು ಬೇರೆಕಡೆ ಹೋಗದ ರೀತಿಯಲ್ಲಿ ಗ್ರಾಮಾಂತರ ಸಭೆ ಆಗಿದೆ. ಗ್ರಾಪಂ, ಜಿ ಪಂ ಮಟ್ಟದಲ್ಲಿ ಪ್ರಚಾರ ವ್ಯವಸ್ಥಿತವಾಗಿ ನಡೆಯಲಿದೆ. ಬೂತ್ ಮಟ್ಟದಲ್ಲಿಯೂ ಜೊತೆಯಾಗಿ ಕಾರ್ಯಕರ್ತರು ಪ್ರಚಾರ ಮಾಡಿ ದೊಡ್ಡ ಲೀಡ್ ರಾಘವೇಂದ್ರರಿಗೆ ತಂದುಕೊಡಲಿದ್ದೇವೆ ಎಂದರು.
ಹೈಕಮಾಂಡ್ ಆದೇಶದ ಮೇರೆಗೆ ಜೆಡಿಎಸ್ ಪ್ರಬಲವಾಗಿರೋ ಪ್ರದೇಶದಲ್ಲಿ ನನ್ನ ಕ್ಷೇತ್ರ ಕೂಡ ಜವಾಬ್ದಾರಿಯುತವಾಗಿದೆ. ಭಯವಿಲ್ಲದೇ ಸಮನ್ವಯ ಹೋರಾಟ ಹರಿಗೆ ವಾರ್ಡಿನಿಂದ ಪ್ರಚಾರ ಆರಂಭಿಸಿದ್ದೇನೆ. ಮೂರು ಬಾರಿ ಸಂಸದರಾಗಿರುವ ರಾಘವೇಂದ್ರ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಬೆಂಬಲಿಸಲು ಎಲ್ಲರೂ ತೀರ್ಮಾನ ಮಾಡಿದ್ದೇವೆ ಎಂದ ಅವರು, ಹಿಂದೆ ವಿರುದ್ಧವಾಗಿ ಕೆಲಸ ಮಾಡಿದ್ದೆವು.ಈಗ ಬೆಂಬಲಿಸಿ ಕೆಲಸ ಮಾಡುವುದರಲ್ಲಿ ಅನುಮಾನ ಬೇಡ.
ಶ್ರೀಮತಿ ಶಾರದಾ ಪೂರ್ಯಾನಾಯ್ಕ. ಗ್ರಾಮಾಂತರ ಶಾಸಕಿ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv