Breaking News

ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಹೆಸರನ್ನು ಮರುಪರಿಶೀಲನೆ ಮಾಡಬೇಕು

 Cnewstv / 27.03.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಹೆಸರನ್ನು ಮರುಪರಿಶೀಲನೆ ಮಾಡಬೇಕು

ಶಿವಮೊಗ್ಗ : ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಹೆಸರನ್ನು ಮರುಪರಿಶೀಲನೆ ಮಾಡಬೇಕು ಮತ್ತು ನನಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ ಎಂದು ಎಸ್.ಪಿ.ದಿನೇಶ್ ಹೇಳಿದರು.

ದಿನದಿAದ ದಿನಕ್ಕೆ ಪಕ್ಷ ಬದಲಾಯಿಸುವ ಆಯನೂರು ಮಂಜುನಾಥ್ ಅವರಿಗೆ ಅದು ಹೇಗೆ ಟಿಕೆಟ್ ಕೊಟ್ಟರೋ ಗೊತ್ತಿಲ್ಲ. ಅದು ಅಲ್ಲದೆ ಬಹಿರಂಗವಾಗಿ ಈಶ್ವರಪ್ಪನವರಿಗೆ ನನ್ನ ಓಟು ಎಂದು ಹೇಳಿದ್ದಾರೆ. ರಾಹುಲ್‌ಗಾಂಧಿ, ಸಿದ್ದರಾಮಯ್ಯ, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಾಯಿಗೆ ಬಂದAತೆ ಮಾತನಾಡಿದ್ದಾರೆ. ಅಂತಹವರ ಪರವಾಗಿ ಕಾರ್ಯಕರ್ತರು ಕೆಲಸ ಮಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು. ಅದು ಅಲ್ಲದೆ ಈಶ್ವರಪ್ಪ ಅವರಿಗೆ ಕಿಚಾಯಿಸಿ ಕಿಚಾಯಿಸಿ ಸ್ಪರ್ಧೆಗೆ ನಿಲ್ಲುವಂತೆ ಮಾಡಿದ್ದಾರೆ. ಈಶ್ವರಪ್ಪ ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌ಗೆ ನಷ್ಟ ಎಂಬುದು ಅವರಿಗೆ ಏಕೆ ಅರ್ಥವಾಗಿಲ್ಲ. ಈಶ್ವರಪ್ಪ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆದರೆ ಯಾರಿಗೆ ನಷ್ಟ ಎಂದು ಪ್ರಶ್ನಿಸಿದರು.

ಈಶ್ವರಪ್ಪ ನಮಗೆ ಎದುರಾಳಿಯೇ ಅಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರ ಪೈಪೋಟಿ. ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ಬಾರದೆ ಘೋಷಣೆಯಾಗಿದೆ ಎಂಬ ಅಂಶವನ್ನು ಅಧ್ಯಕ್ಷರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ನನಗೆ ವೋಟ್ ಹಾಕಿದರೆ ಯಡೊಯೂರಪ್ಪನವರಿಗೆ ವೋಟ್ ಹಾಕಿದಂತೆ. ದಿನೇಶ್ ಗೆ ಹಾಕಿದರೆ ಸಿದ್ದರಾಮಯ್ಯಗೆ ಎಂದು ಹೇಳಿ ಪ್ರಚಾರ ಮಾಡಿದ್ದರು. ಗೋಡ್ಸೆ ಸಂತತಿ ಎಂದು ಟೀಕೆ ಮಾಡಿದ್ದರು.

ಪಕ್ಷದಲ್ಲಿ ದುಡಿದಿರುವ ಯಾರಿಗೆ ಬೇಕಾದರೂ ಕೊಡಲಿ. ಕೆಲಸ ಮಾಡುತ್ತೇವೆ. ಆದರೆ ಆಯನೂರು ಮಂಜುನಾಥ್ ಪರ ಕೆಲಸ ಮಾಡಲು ಕಷ್ಟವಾಗುತ್ತದೆ ಮತ್ತು ಇಷ್ಟ ಇಲ್ಲ. ನಾವು ಈಗಾಗಲೇ ನೋಂದಣಿಯನ್ನು ಸಾಕಷ್ಟು ಮಾಡಿದ್ದೇವೆ. ಶ್ರಮ ಪಟ್ಟಿದ್ದೇವೆ. ನಮಗೆ ಟಿಕೆಟ್ ಕೊಡಿ ಎಂದು ಕೇಳುತ್ತಿದ್ದೇವೆ ಹೊರತು ಇದು ಪಕ್ಷ ವಿರೋಧಿ ಚಟುವಟಿಕೆಯಲ್ಲ. ಈ ಹಿಂದೆ ಎಷ್ಟೋ ಬಾರಿ ಟಿಕೆಟ್ ಅನೌನ್ಸ್ ಮಾಡಿ ಬದಲಾವಣೆ ಮಾಡಿದ ಉದಾಹರಣೆ ಇದೆ. ಹಾಗೆಯೇ ನನಗೂ ಮಾಡಲಿ. ಒಂದು ಪಕ್ಷ ಬದಲಾವಣೆ ಸಾಧ್ಯವಾಗದೆ ಇದ್ದರೆ ನಮಗೆ ಮುಂದಿನ ನಿರ್ಧಾರವನ್ನು ಮುಂದೆ ತಿಳಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವನಾಥಕಾಶಿ, ಜ್ಯೋತಿ ಅರಳಪ್ಪ, ಜಗದೀಶ್ ಮಹಾಲಿಂಗೇಗೌಡ, ಸತೀಶ್‌ಕುಮಾರ್, ಕುಮಾರ್, ಮಹೇಶ್ ಇದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ..

Leave a Reply

Your email address will not be published. Required fields are marked *

*