Www.cnewstv.in / 20.03.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಂಸದರಾಗುವ ಮೊದಲು ರಾಘವೇಂದ್ರ ಏನು ಕಡಿದು ಬಂದಿದ್ದರು ?? ನಿಮ್ಮಪ್ಪ ಮಾಡಿದ ಭ್ರಷ್ಟಾಚಾರದ ಹಣದಿಂದ ಸಂಸದರಾಗಿದ್ದೀರಾ..
ಶಿವಮೊಗ್ಗ : ಸಂಸದರಾಗುವ ಮೊದಲು ರಾಘವೇಂದ್ರ ಏನು ಕಡಿದು ಬಂದಿದ್ದರು ?? ನಿಮ್ಮಪ್ಪ ಮಾಡಿದ ಭ್ರಷ್ಟಾಚಾರದ ಹಣದಿಂದ ಸಂಸದರಾಗಿದ್ದೀರಾ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಇಂದು ಲಗಾನ್ ಕಲ್ಯಾಣ ಮಂಟಪದಲ್ಲಿ ಆ ಯೋಜನೆ ಮಾಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಗೀತಾ ಶಿವರಾಜ್ ಕುಮಾರ್ ನನ್ನ ಅಕ್ಕ ಇರಬಹುದು, ಆದರೆ ಮಧು ಬಂಗಾರಪ್ಪ ಗೀತಾ ಶಿವರಾಜ್ ಕುಮಾರ್ ಅವರಿಗೆ ಮೀಡಿಯೇಟರ್ ಅಲ್ಲ
ಬಂಗಾರಪ್ಪ ಅವರ ಧ್ವನಿಯಾಗಿ ಕೆಲಸ ಮಾಡ್ತಾರೆ ಎಂದರು.
ಸಂಸದರಾಗುವ ಮೊದಲು ರಾಘವೇಂದ್ರ ಏನು ಕಡಿದು ಬಂದಿದ್ದರು ? ನಿಮ್ಮಪ್ಪ ಮಾಡಿದ ಭ್ರಷ್ಟಾಚಾರದ ಹಣದಿಂದ ಸಂಸದರಾಗಿದ್ದೀರಾ..ನಿಮ್ಮಪ್ಪ 2009 ರಲ್ಲಿ ಮುಖ್ಯಮಂತ್ರಿ. ನಮ್ಮಪ್ಪ 1990 ರಲ್ಲೇ ಮುಖ್ಯಮಂತ್ರಿ, ನಾವು 1990 ರಲ್ಲೇ ಮುಖ್ಯಮಂತ್ರಿ ಮಕ್ಕಳು. ನಮ್ಮಪ್ಪ ಭ್ರಷ್ಟಾಚಾರದ ಹಣ ಮಾಡಿಲ್ಲ. ನಾವು ಯಾರು ಚೋಟಾ ಸಹಿ ಹಾಕಿ ನಮ್ಮಪ್ಪನನ್ನು ಜೈಲಿಗೆ ಕಳುಹಿಸಲಿಲ್ಲ. ಎಂದು ಯಡಿಯೂರಪ್ಪ ಕುಟುಂಬದ ವಿರುದ್ದ ವಾಗ್ದಾಳಿ ನಡೆಸಿದ್ದರು.
ಗೀತಾ ಶಿವರಾಜ್ ಕುಮಾರ್ ನೂರಕ್ಕೆ ನೂರು ಲೋಕಸಭೆಯಲ್ಲಿ ನಿಮ್ಮ ಧ್ವನಿಯಾಗಿ ನಿಲ್ತಾರೆ. ರಾಘವೇಂದ್ರ ಕಳೆದ 15 ವರ್ಷದಲ್ಲಿ ಶರಾವತಿ ಸಂತ್ರಸ್ಥರ ಬಗ್ಗೆ ಮಾತನಾಡಲಿಲ್ಲ. ರಾಘವೇಂದ್ರ ಅವರ ಹೆಸರಿನಲ್ಲಿ ಗೆದ್ದಿಲ್ಲ. ರಾಜ್ಯದಲ್ಲಿ ಗೆದ್ದ ಎಲ್ಲಾ ಸಂಸದರು ನರೇಂದ್ರ ಮೋದಿ ಅವರ ಹೆಸರಿನಲ್ಲಿ ಗೆದ್ದಿದ್ದು. ಈ ಬಾರಿ ನರೇಂದ್ರ ಮೋದಿ ಅವರ ಹೆಸರಿನಲ್ಲೇ ಸೋಲುತ್ತಾರೆ. ಯಾಕೆಂದರೆ ನರೇಂದ್ರ ಮೋದಿ ಅವರು ಸುಳ್ಳು ಹೇಳ್ತಾರೆ. ಸುಳ್ಳಿನಿಂದಾಗಿಯೇ ಬಿಜೆಪಿ ಸಂಸದರು ಸೋಲ್ತಾರೆ ಎಂದರು.
#Shivakumar #Geethashivakuram #Shivamogga #Congress #election2024 #MPElection
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments