Www.cnewstv.in / 20.03.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆ ಅದ್ದೂರಿ ಬೈಕ್ ರ‍್ಯಾಲಿ ಸ್ವಾಗತ..
ಶಿವಮೊಗ್ಗ : ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ರವರಿಗೆ ಇಂದು ಅದ್ದೂರಿಯಾಗಿ ಸ್ವಾಗತ ನೀಡಲಾಯಿತು.
ಶಿವಮೊಗ್ಗ – ಚಿಕ್ಕಮಂಗಳೂರು ಜಿಲ್ಲೆಯ ಗಡಿಭಾಗವಾದ ಕಾರೆಹಳ್ಳಿ ಗ್ರಾಮದಿಂದ ಹುಚ್ಚಿನ ದಾಸಪ್ಪ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವುದರ ಮೂಲಕ ಶಿವಮೊಗ್ಗಕ್ಕೆ ಪ್ರಯಾಣವನ್ನು ಬೆಳೆಸಿದರು. ಇನ್ನು ಶಿವಮೊಗ್ಗಕ್ಕೆ ಬೆಂಬಲಿಗರು ಹಾಗೂ ನೂರಾರು ಕಾರ್ಯಕರ್ತರುಯ ಬೈಕ್ ರ‍್ಯಾಲಿ ಮೂಲಕ ಅದ್ದೂರಿಯಾಗಿ ತಮ್ಮ ಅಭ್ಯರ್ಥಿಯನ್ನು ಬರಮಾಡಿಕೊಂಡರು.
ನಟ ಶಿವರಾಜ್ ಕುಮಾರ್ ನೋಡಲು ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದು, ಸುಮಾರು 5 ಕಿ.ಮೀ ವರೆಗೆ ಬೈಕ್ ರ‍್ಯಾಲಿ ಮೂಲಕ ಪ್ರಚಾರ ನಡೆಸಿದರು. ಇನ್ನು ಅಭಿಮಾನಿಗಳನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಸಹೋದರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ, ಸಾಗರ ಶಾಸಕ ಬೇಲೂರು ಗೋಪಾಲಕೃಷ್ಣ, ಭದ್ರಾವತಿ ಶಾಸಕ ಬಿಕೆ ಸಂಗಮ, ಬಿ ವಿ ಶ್ರೀನಿವಾಸ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
#Shivakumar #Geethashivakuram #Shivamogga #Congress #election2024 #MPElection
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments