Breaking News

ಎಂಪಿ ಆಗಬೇಕು ಅಷ್ಟೇ ಅಲ್ಲ.. ಭವಿಷ್ಯದಲ್ಲಿ ಈ ಪಕ್ಷಕ್ಕೆ ಸರಿಯಾದ ಭವಿಷ್ಯವಿರಬೇಕು… ಕೂತುಹಲ ಸೃಷ್ಟಿಸಿದ ಈಶ್ವರಪ್ಪನವರ ಹೇಳಿಕೆ.

Cnewstv / 13.03.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಎಂಪಿ ಆಗಬೇಕು ಅಷ್ಟೇ ಅಲ್ಲ.. ಭವಿಷ್ಯದಲ್ಲಿ ಈ ಪಕ್ಷಕ್ಕೆ ಸರಿಯಾದ ಭವಿಷ್ಯವಿರಬೇಕು… ಕೂತುಹಲ ಸೃಷ್ಟಿಸಿದ ಈಶ್ವರಪ್ಪನವರ ಹೇಳಿಕೆ.

ಶಿವಮೊಗ್ಗ : ನಾನು ಎಂಪಿ ಆಗಬೇಕು ಅಷ್ಟೇ ಅಲ್ಲ. ಬದಲಿಗೆ ಬಿಜೆಪಿಯ ಭವಿಷ್ಯ ಅಡಗಿದೆ ಎಂಬ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕುತೂಹಲವನ್ನು ಮೂಡಿಸಿದೆ.

ಪುತ್ರನಿಗೆ ಟಿಕೆಟ್ ಪಡೆಯುವುದರ ಹಿಂದೆ ಬರೀ ನನ್ನ ರಾಜಕೀಯ ಭವಿಷ್ಯ ಅಡಗಿಲ್ಲ. ಬದಲಿಗೆ ಬಿಜೆಪಿಯ ಭವಿಷ್ಯ ಅಡಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ೬೬ ಸ್ಥಾನಗಳನ್ನು ಪಡೆದಿದ್ದೆವು. ಹಲವು ತಪ್ಪುಗಳು ನಡೆದಿದ್ದವು. ಈ ತಪ್ಪುಗಳು ಸರಿಯಾಗಬೇಕೆಂದು ಹಲವರು ಹೇಳುತ್ತಿದ್ದಾರೆ. ನಾನು ಯಾವುದೇ ತೀರ್ಮಾನ ಇದುವರೆಗೂ ಕೈಗೊಂಡಿಲ್ಲ. ಯಾವುದೇ ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ ನನ್ನ ಮನಸ್ಸಿಗೆ ಬಂದಿದ್ದನ್ನು ನಿಮ್ಮ ಎದುರು ಹೇಳಿದ್ದೇನೆ. ಪಕ್ಷದಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸುವ ಚಿಂತನೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದಲ್ಲಿ ಸಾಕಷ್ಟು ತಪ್ಪುಗಳಾಗಿದೆ ಎಂದು ಒಪ್ಪಿಕೊಂಡಿದ್ದೇವೆ. ಪಕ್ಷ ಉಳಿಸುವ ನಿಟ್ಟಿನಲ್ಲಿ ಈ ಎಲ್ಲಾ ತಪ್ಪುಗಳು ಸರಿ ಹೋಗಬೇಕೆಂಬುದು ನಮ್ಮ ಅಪೇಕ್ಷೆ ಎಂದು ತಿಳಿಸಿದರು.

 

 

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಕೊಡಿಸುವೆ. ಅಲ್ಲಿ ಓಡಾಡಿ ಗೆಲ್ಲಿಸಿಕೊಂಡು ಬರುವೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಭರವಸೆ ಕೊಟ್ಟ ಕಾರಣಕ್ಕೆ ಪುತ್ರ ಕಾಂತೇಶನನ್ನು ಅಲ್ಲಿಗೆ ಕಳುಹಿಸಿದ್ದೆ. ಈಗಲೂ ಹಾವೇರಿಯಿಂದ ಪುತ್ರನಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಒಂದೊಮ್ಮೆ ಅಗತ್ಯ ಬಿದ್ದರೆ ಶಿವಮೊಗ್ಗ ಕ್ಷೇತ್ರದಿಂದ ನಾನೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹೈಕಮಾಂಡ್ ಸೂಚನೆಯಂತೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ನನಗೆ ಶಿಸ್ತಿನ ರಾಜಕಾರಣಿ ಎಂದು ಕರೆ ಮಾಡಿ ಹೊಗಳಿದ್ದರು. ಆನಂತರ ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಮಗನಿಗೆ ಟಿಕೆಟ್ ನೀಡುವಂತೆ ಕೇಳಿದ್ದೆ. ಆದರೆ, ಆಗ ಅಮಿತ್ ಶಾ ನಿಮ್ಮ ಸೊಸೆಗೆ ಟಿಕೆಟ್ ಕೊಡುತ್ತೇವೆ ಅಂದಿದ್ದರು. ನಾನು ನನ್ನ ಸೋಸೆಯನ್ನು ದೇವಸ್ಥಾನಕ್ಕೆ ಬಿಟ್ಟರೆ ಹೊರಗೆ ಕಳಿಸಲ್ಲ ಎಂದಿದ್ದೆ ಎಂದರು.

ಮೇಲಾಗಿ ನಾನಾಗೆ ಹಾವೇರಿಗೆ ಹೋಗಿಲ್ಲ. ಹಾವೇರಿ ಚುನಾವಣೆ ಹೋಗುವ ಮೊದಲು ಮಾಜಿ ಸಿಎಂ ಯಡಿಯೂರಪ್ಪ ನವರನ್ನು ಭೇಟಿ ಮಾಡಿದ್ದೆ. ಆಗ ಯಡಿಯೂರಪ್ಪ ನವರು ಟಿಕೆಟ್ ಸಹ ಕೊಡುತ್ತೇನೆ ನಾನು ಓಡಾಡುತ್ತೇನೆ ಎಂದಿದ್ದರು. ಈಗಲೂ ನನಗೆ ನಂಬಿಕೆ ಇದೆ ಟಿಕೆಟ್ ಸಿಗುತ್ತೆ. ಪುತ್ರನಿಗೆ ಟಿಕೆಟ್ ಸಿಗದೇ ಇದ್ದಲ್ಲಿ ಶುಕ್ರವಾರ ಶಿವಮೊಗ್ಗದ ಬಂಜಾರ ಭವನದಲ್ಲಿ ಬೆಂಬಲಿಗರು ಸಭೆ ಕರೆದಿದ್ದು, ಅಲ್ಲಿ ತೆಗೆದುಕೊಳ್ಳುವ ತೀರ್ಮಾನದಂತೆ ಮುಂದುವರೆಯುವೆ ಎಂದು ಹೇಳಿದರು.

ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಅಂತಾ ನನ್ನ ಅಭಿಮಾನಿಯೊಬ್ಬರು ಹಾಕಿದ್ದಾರೆ. ಇಡೀ ಜಿಲ್ಲೆಯ ಹಿತೈಷಿಗಳ ಜೊತೆ ಚೆರ್ಚೆ ಮಾಡಿ ತೀರ್ಮಾನ ತಿಳಿಸುತ್ತೇನೆ. ನಮ್ಮ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ ನೀವು ಪಕ್ಷೇತರ ನಿಲ್ಲ ಬೇಕು ಎಂದು ಈಗ ಸಭೆ ಕರೆದಿದ್ದಾರೆ ಆ ಸಭೆಗೆ ಭಾಗವಹಿಸಿ ಆಮೇಲೆ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸುತ್ತೇನೆ ಎಂದರು.

ಪ್ರಹ್ಲಾದ್ ಜೋಶಿ ನನ್ನ ಆತ್ಮೀಯ ಸ್ನೇಹಿತ. ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದಾಗ ಆತ ಪ್ರಧಾನ ಕಾರ್ಯದರ್ಶಿ. ಬಂಡಾಯ ಸ್ಪರ್ಧೆಯ ಬಗ್ಗೆ ಚರ್ಚೆ ಆಗಿರುವುದು ಹೌದು. ನಾನು ಬಿಜೆಪಿಯಲ್ಲಿ ಸೀನಿಯರ್ ಮೋಸ್ಟ್ ಎನ್ನುವುದು ಹೌದು. ನಾನು ಏನು ಕ್ರಮ ತೆಗೆದುಕೊಳ್ಳಬೇಕು ಎಂಬುವುದರ ಬಗ್ಗೆ ನನ್ನ ಹಿತೈಷಿಗಳು ಚರ್ಚೆ ಮಾಡುತ್ತಿದ್ದಾರೆ.ಬಲಿಪಶು ಅಂತಾ ನಾನೇ ಅಂದುಕೊಂಡಿಲ್ಲ, ನೀವು ಯಾಕೆಅಂದುಕೊಳ್ತೀರಾ. ನಿಮಗೆ ಕುತೂಹಲ ಇರಲಿ ಎಂದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ..

Leave a Reply

Your email address will not be published. Required fields are marked *

*