Cnewstv / 13.03.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಪರೀಕ್ಷೆಗೆ ಯಾವುದೇ ತೊಂದರೆ ಇಲ್ಲ…
ಶಿವಮೊಗ್ಗ : ಮಾ.18 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವುದರಿಂದ ಪಿ.ಯು.ಸಿ.ಪರೀಕ್ಷೆ ಬರೆಯುವ ವಿದ್ಯಾಥಿಗಳಿಗೆ ಯಾವುದೇ ತೊಂದರೆ ಆಗದಂದಂತೆ ನೋಡಿಕೊಳ್ಳುವುದಾಗಿ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಈಗಾಗಲೇ ಪಿ.ಯು.ಸಿ.ಪರೀಕ್ಷೆಗಳು ಆರಂಭವಾಗಿವೆ. ದಿ.೧೮ರಂದೂ ಪರೀಕ್ಷೆ ಇದೆ. ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುತ್ತದೆ. ಸಂಚಾರ ವ್ಯತ್ಯಯವೂ ಆಗುವ ಸಂಭವವಿರುತ್ತದೆ. ಇದು ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ಆಗಬಹುದು ಎಂಬ ಅಂಶವನ್ನು ನಮ್ಮ ಪ್ರತಿನಿಧಿ ಸಂಸದರ ಗಮನಕ್ಕೆ ತಂದಾಗ ಸಂಸದರು ಈ ಮೇಲಿನಂತೆ ಉತ್ತರಿಸಿ, ನೀವು ಈ ವಿಷಯ ಗಮನಕ್ಕೆ ತಂದಿದ್ದು ಒಳ್ಳೆಯದಾಯಿತು. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಅವರು ಭರವಸೆ ನೀಡಿದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ನೋಡಿ..
Recent Comments