Breaking News

ಗ್ಯಾಸ್ ಸಿಲೆಂಡರ್ ಸ್ಫೋಟ ಹೊತ್ತಿ ಉರಿದ ಮನೆ.

Cnewstv / 28.2.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಗ್ಯಾಸ್ ಸಿಲೆಂಡರ್ ಸ್ಫೋಟ ಹೊತ್ತಿ ಉರಿದ ಮನೆ.

ಶಿವಮೊಗ್ಗ : ಶಿವಮೊಗ್ಗ ಗೋಪಾಲಗೌಡ ಬಡಾವಣೆ ಕೃಷ್ಣಮಠ ಹತ್ತಿರದ ಮನೆ ಒಂದರಲ್ಲಿ ಗ್ಯಾಸ್ ಸಿಲೆಂಡರ್ ಸ್ಪೋಟಗೊಂಡು ಘಟನೆ ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ಕಾಣಿಸಿಕೊಂಡಿದೆ ತಕ್ಷಣವೇ ಸ್ಥಳೀಯರು ಇದನ್ನ ಗಮನಿಸಿ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ತಿಳಿಸಿದ್ದಾರೆ.

ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ ಕೆಲವೇ ನಿಮಿಷಗಳಲ್ಲಿ ಎರಡು ಗ್ಯಾಸ್ ಸಿಲೆಂಡರ್ ಸ್ಪೋಟಗೊಂಡಿದ್ದು, ಸಿಬ್ಬಂದಿಗಳ ಸಮಯ ಪ್ರಜ್ಞೆ ಯಿಂದಾಗಿ ದೊಡ್ಡ ಅನಾಹುತ ಒಂದು ತಪ್ಪಿದೆ.

ಸ್ಪೋಟದ ತೀವ್ರತೆಯಿಂದಾಗಿ ಅಕ್ಕಪಕ್ಕದ ಮನೆಯ ಗಾಜುಗಳು ಪುಡಿಪುಡಿಯಾಗಿದ್ದು, ಸಮೀಪದ ಮನೆಗಳಿಗೂ ಕೂಡ ಹಾನಿಯಾಗಿದೆ. ಪಿಯು ಬೋರ್ಡ್ ನಿರ್ದೇಶಕರಾಧ ಕೃಷ್ಣಪ್ಪನವರ ಮನೆಯಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ. ಈ ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿಗಳು ಬರಬೇಕಿದೆ.

#gasblast #Shivamogga #Gopalagowdabadabane #cylinderblast

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*