Www.cnewstv.in / 19.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರಾಜ್ಯದ ಇತಿಹಾಸದಲ್ಲಿ ಹೊಸ ಕಾರ್ಯಕ್ಕೆ ಮುಂದಾದ ಪ್ರದೀಪ್ ಈಶ್ವರ್..
ಶಿವಮೊಗ್ಗ : ರಾಜ್ಯದ ಇತಿಹಾಸದಲ್ಲಿ ಹೊಸ ಕಾರ್ಯಕ್ಕೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮುಂದಾಗಿದ್ದಾರೆ..
ಹೌದು ಸೂಪರ್ 60 ಅನ್ನುವ ಒಂದು ಹೊಸ ಕಾರ್ಯಕ್ರಮದ ಮೂಲಕ ಇಡಿ ರಾಜ್ಯದ ಜನರ ಗಮನವನ್ನು ಪ್ರದೀಪ್ ಈಶ್ಚರ್ ಚಿಕ್ಕಬಳ್ಳಾಪುರದತ್ತಾ ಸೆಲೆದ್ದಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ ಚಿಕ್ಕಬಳ್ಳಾಪುರದ ಫಲಿತಾಂಶ ಕಡಿಮೆಯಾಗುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡ ಶಾಸಕ ಪ್ರದೀಪ್ ಈಶ್ವರ್ ರವರು ತಮ್ಮ ಜಿಲ್ಲೆಯ ಪ್ರತಿಭಾನ್ವಿತ 120 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ತಮ್ಮ ಪರಿಶ್ರಮ ನೀಟ್ ಅಕಾಡೆಮಿ ವತಿಯಿಂದ ಮೂರು ತಿಂಗಳ ಕಾಲ ತಮ್ಮ ಸ್ವಂತ ಖರ್ಚಿನಲ್ಲಿ ತರಬೇತಿಯನ್ನು ನೀಡಲು ಮುಂದಾಗಿದ್ದಾರೆ.
ಚಿಕ್ಕಬಳ್ಳಾಪುರದ ಸರ್ಕಾರಿ ಹಾಗೂ ಅನುದಾನ ರಹಿತ ಶಾಲೆಯ ಬಡ, ಅನಾಥ ಹಾಗೂ ಸಿಂಗಲ್ ಪೇರೆಂಟ್ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳಿಗೆ ಮುಂದಿನ ಮೂರು ತಿಂಗಳು ಪರಿಶ್ರಮ ನೀಟ್ ಅಕಾಡೆಮಿಯಲ್ಲಿ ತಜ್ಞ ಶಿಕ್ಷಕರಿಂದ ಉನ್ನತ ಮಟ್ಟದ ಶಿಕ್ಷಣವನ್ನು ನೀಡುತ್ತಾರೆ. ಆಯ್ಕೆಯಾದ ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕಗಳನ್ನುಗಳಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
#PradeepEshwar #Parishrama neet academy #chikkaballapur #Congress
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv