Breaking News

ಯುವನಿಧಿ : ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಆಗಮಿಸಿದ ರೈತನನ್ನು ಎಬ್ಬಿಸಿ ಹೊರಗೆ ಕಳಿಸಿದ ಪೊಲೀಸರ ನಡೆಗೆ ತೀವ್ರ ಆಕ್ರೋಶ..

Www.cnewstv.in / 13.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಯುವನಿಧಿ : ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಆಗಮಿಸಿದ ರೈತನನ್ನು ಎಬ್ಬಿಸಿ ಹೊರಗೆ ಕಳಿಸಿದ ಪೊಲೀಸರ ನಡೆಗೆ ತೀವ್ರ ಆಕ್ರೋಶ..

ಶಿವಮೊಗ್ಗ : ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ಸರ್ಕಾರದ 5 ನೇ ಗ್ಯಾರಂಟಿ ಯೋಜನೆ ಯುವನಿಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ರೈತನನ್ನು ಪೋಲಿಸರು ಎಬ್ಬಿಸಿ ಹೊರಗೆ ಕಳಿಸಿದ ಘಟನೆ ನಡೆದಿದೆ.

 

ಬಗರ್ ಹುಕುಂ ರೈತರಿಗೆ ನ್ಯಾಯ ಕೊಡಿ ಎಂದು ಪ್ಲೇ ಕಾರ್ಡ್ ಹಿಡಿದ್ದು, ರೈತರ ಸಮಸ್ಯೆ ಬಗ್ಗೆ ಸಿಎಂ, ಡಿಸಿಎಂ, ಸಚಿವರ ಗಮನ ಸೆಳೆಯಲು, ನ್ಯಾಯ ಕೇಳಲು ಬಂದಿದ್ದ ರೈತನನ್ನೇ ಪೋಲಿಸರು ಕಾರ್ಯಕ್ರಮದಿಂದ ಹೊರ ಹಾಕಿದ್ದಾರೆ.

ರೈತರಿಗೆ ನ್ಯಾಯ ಕೊಡಿ ಎಂದು ಪ್ಲೇ ಕಾರ್ಡ್ ಹಿಡಿದಿದ್ದ ರೈತನನ್ನು ಗಮನಿಸಿದ ಪೋಲಿಸರು ಸಭೆಯಿಂದ ಎಬ್ಬಿಸಿ
ಕಳ್ಳನಂತೆ ಎಳೆದುಕೊಂಡು ಹೋಗಿದ್ದಾರೆ.

ಪ್ಲೇಕಾರ್ಡ್ ತೋರಿಸುವುದು, ಕಪ್ಪು ಬಾವುಟ ಬೀಸುವುದು, ಸರ್ಕಾಎದ ವಿರುದ್ಧ ಘೋಷಣೆ ಕೂಗುವುದು ಮುಖ್ಯಮಂತ್ರಿಗಳಿಗೆ ಮುಜುಗರವನ್ನುಂಟು ಮಾಡುತ್ತದೆ. ಹಾಗೂ ಶಿಷ್ಟಾಚಾರ ಉಲ್ಲಂಘನೆಯಾಗುತ್ತದೆ ಎಂಬುದು ಪೊಲೀಸರ ಅಭಿಪ್ರಾಯ. ಅದರೆ, ಕನಿಷ್ಟಪಕ್ಷ ಪ್ಲೇಕಾಡನ್ನು ತೆಗೆದುಕೊಂಡು ರೈತನಿಗೆ ಕಾರ್ಯಕ್ರಮವನ್ನು ನೋಡಲಾದರೂ ಅವಕಾಶ ನೀಡಬಹುದಿತ್ತು. ಎಷ್ಟೋ ದೂರ ಗಳಿಂದ ಮುಖ್ಯಮಂತ್ರಿಗಳನ್ನ ನೋಡಲು ತಮ್ಮ ಅವಾಲುಗಳನ್ನ ನೀಡಲು ರೈತರು ಆಗಮಿಸಿರುತ್ತಾರೆ. ಅವರೊಂದಿಗೆ ಈ ರೀತಿಯ ವರ್ತನೆ ಮಾಡಬಾರದಿತ್ತು ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

#Freedompark #Yuvanidhi #DKShivakumar #Sidaramayya #Shivamogga #Congress

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ..

Leave a Reply

Your email address will not be published. Required fields are marked *

*